ಕಲಬುರಗಿ: ಗುಲ್ಬರ್ಗಾ ಲೋಕಸಭಾ ಮೀಸಲು ಕ್ಷೇತ್ರಕ್ಕೆ 2019 ರ ಎಪ್ರಿಲ್ 23ರಂದು ನಡೆಯುವ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಮುಗಿಯಿತು. 19 ಅಭ್ಯರ್ಥಿಗಳ 36 ನಾಮಪತ್ರಗಳು ಕ್ರಮಬದ್ಧವಾಗಿದ್ದು, 3 ನಾಮಪತ್ರಗಳು ಹಾಗೂ ಇಬ್ಬರು ಅಭ್ಯರ್ಥಿಗಳು ತಿರಸ್ಕೃತರಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ತಿರಸ್ಕೃತಗೊಂಡ ಅಭ್ಯರ್ಥಿಗಳು:
- ಸಾಯಿ ಮಾರೇಶ್ ಪರಶುರಾಮ್- ಪಿರಮಿಡ್ ಪಾರ್ಟಿ ಆಫ್ ಇಂಡಿಯಾ
- ಕಾಶಿನಾಥ್ ಸಾಯಿಬಣ್ಣ- ಪಕ್ಷೇತರ ಅಭ್ಯರ್ಥಿ
ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಸಾಯಿ ಮಾರೇಶ್ ಪರಶುರಾಮ ಅವರು ತಮ್ಮ ನಾಮಪತ್ರದಲ್ಲಿ ಸೂಚಕರ ಮಾಹಿತಿ ಅಪೂರ್ಣವಾಗಿ ನೀಡಿದ್ದು, ಸೂಚಕರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಶಿನಾಥ್ ಸಾಯಿಬಣ್ಣ ಅವರು ಸಲ್ಲಿಸಿದ ನಾಮಪತ್ರದ ಅಫಿಡವಿಟ್ನ ಎಲ್ಲಾ ಕಾಲಂಗಳು ಭರ್ತಿಯಾಗಿಲ್ಲ ಎಂಬ ಉದ್ದೇಶದಿಂದ ಇವರ ನಾಮಪತ್ರಗಳು ತಿರಸ್ಕೃತವಾಗಿವೆ.
ಇನ್ನೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಒಂದು ನಾಮಪತ್ರದಲ್ಲಿ ರುಜು ಮಾಡಿಲ್ಲವಾದ್ದರಿಂದ ಆ ನಾಮಪತ್ರ ತಿರಸ್ಕೃತವಾಗಿದೆ. ಹೀಗಾಗಿ ಒಟ್ಟು ಇಬ್ಬರು ಅಭ್ಯರ್ಥಿಗಳು ಹಾಗೂ ಮೂರು ನಾಮಪತ್ರಗಳು ತಿರಸ್ಕೃತಗೊಂಡು 19 ಅಭ್ಯರ್ಥಿಗಳ 36 ನಾಮಪತ್ರಗಳು ಪುರಸ್ಕೃತವಾಗಿವೆ. ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನ ಏಪ್ರಿಲ್ 8 ಆಗಿರುತ್ತದೆ ಎಂದು ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಪುರಸ್ಕೃತಗೊಂಡ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷ:
- ಮಹೇಶ್ ಲಂಬಾಣಿ ಈಶ್ವರ ನಾಯಕ್ - ಉತ್ತಮ ಪ್ರಜಾಕೀಯ ಪಕ್ಷ
- ಶಂಕರ್ ಲಿಂಬಾಜಿ ಜಾಧವ್ - ಭಾರತೀಯ ಪೀಪಲ್ಸ್ ಪಕ್ಷ
- ಶಶಿಧರ್ ಬಸವರಾಜ್- ಪಕ್ಷೇತರ ಅಭ್ಯರ್ಥಿ
- ದತ್ತಪ್ಪ ಕೃಷ್ಣಪ್ಪ- ರಾಷ್ಟ್ರೀಯ ಸಮಾಜ ಪಕ್ಷ
- ಶರಣಬಸಪ್ಪ- ಎಸ್ಯುಸಿಐ
- ತಿಮ್ಮರಾಜು ಗಂಗಪ್ಪ- ಪಕ್ಷೇತರ ಅಭ್ಯರ್ಥಿ
- ರಮೇಶ್ ಭೀಮ್ ಸಿಂಗ್- ಪಕ್ಷೇತರ ಅಭ್ಯರ್ಥಿ
- ರಾಜಕುಮಾರ್ ಗೋಪಿನಾಥ್- ಭಾರತೀಯ ಬಹುಜನ ಕ್ರಾಂತಿ ದಳ
- ಉಮೇಶ್ ಗೋಪಾಲ್ ದೇವ್ ಜಾಧವ್- ಭಾರತೀಯ ಜನತಾ ಪಾರ್ಟಿ
- ಗುರುಶಾಂತ ಮಲ್ಲಪ್ಪ ಪಟ್ಟೆದಾರ- ಪಕ್ಷೇತರ ಅಭ್ಯರ್ಥಿ
- ವಿಶ್ವೇಶ್ವರಯ್ಯ ತುಳಜಾರಾಮ ಬೋವಿ- ಪಕ್ಷೇತರ ಅಭ್ಯರ್ಥಿ
- ವಾಸುದೇವರಾವ್ ಭೀಮರಾವ್ - ಬಹುಜನ ಸಮಾಜ ಪಾರ್ಟಿ
- ವಿಠಲ್ ಜಾಧವ್- ಜನತಾದಳ( ಜಾತ್ಯಾತೀತ)
- ವಿಜಯ ಗೋವಿಂದ ಜಾಧವ್- ಸರ್ವ ಜನತಾ ಪಕ್ಷ
- ಹನುಮಂತರಾವ್ ನಾಯಕ್ ಭೀಮಾ ನಾಯಕ್- ಪಕ್ಷೇತರ ಅಭ್ಯರ್ಥಿ
- ಮಲ್ಲಿಕಾರ್ಜುನ ಮಾಪ್ಪಣ್ಣಾ ಖರ್ಗೆ- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
- ರಾಮು ಚತ್ರು- ಪಕ್ಷೇತರ ಅಭ್ಯರ್ಥಿ
- ಜಗನ್ನಾಥ್ ಮಣ್ಣು- ಪಕ್ಷೇತರ ಅಭ್ಯರ್ಥಿ
- ಡಾ.ಎಂ.ಪಿ ದ್ವಾರಕೇಶ್ವರಯ್ಯಾ- ಪಕ್ಷೇತರ ಅಭ್ಯರ್ಥಿ
ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸೇರಿ ಒಟ್ಟು 19 ನಾಮಪತ್ರ ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.