ETV Bharat / state

ಬಿಎಸ್‌ವೈ ಸಂಪುಟದಲ್ಲಿ ಸಿಗದ ಸ್ಥಾನ.. 'ಹೈ-ಕ' ಭಾಗದಲ್ಲಿ ಪ್ರತಿಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು.. - Yadiyurappa government

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಂಪೂರ್ಣವಾಗಿ ಹೈದರಾಬಾದ್​ ಕರ್ನಾಟಕವನ್ನು ಕಡೆಗಣಿಸಿದ್ದಾರೆ ಎಂದು ಬಿಸಿಲುನಾಡಿನ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತ್ಯೇಕ ರಾಜ್ಯದ ಧ್ವನಿ ಮೊಳಗಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ
author img

By

Published : Aug 20, 2019, 8:28 PM IST

ಕಲಬುರಗಿ : ಒಂದು ಕಾಲದಲ್ಲಿ ಜಿಲ್ಲೆಗೆ ಆರು ಸಚಿವ ಸ್ಥಾನಗಳು ಒಲಿದು ಬಂದಿದ್ದವು. ಅಲ್ಲದೆ ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸಚಿವ ಸ್ಥಾನ ತಪ್ಪಿರಲಿಲ್ಲ. ಆದರೆ, ಪ್ರಥಮ ಬಾರಿಗೆ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿದೆ. ಅದ್ಯಾಕೋ ಸಿಎಂಗೆ ಜಿಲ್ಲೆಯ ಮೇಲೆ ಒಲವು ಕಂಡುಬಂದಿಲ್ಲ. ಇದು ಬಿಸಿಲನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ‌.

ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಫಿಕ್ಸ್‌ ಎಂಬ ಮಾತು ಹಿಂದಿನಿಂದಲೂ ಇದೆ. ಸ್ವತಂತ್ರ ಬಂದಾಗಿನಿಂದ ಈವರೆಗೆ ಸಚಿವ ಸ್ಥಾನ ಕೈತಪ್ಪಿಲ್ಲ. 1999ರಿಂದ 2004ರ ತನಕ ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎನ್.ಧರಂಸಿಂಗ್, ಬಾಬುರಾವ ಚಿಂಚನಸೂರ, ಬಾಬುರಾವ ಚೌಹಾಣ್, ಎ.ಬಿ ಮಾಲಕರೆಡ್ಡಿ ಮತ್ತು ಖಮರುಲ್ ಇಸ್ಲಾಂ ಒಟ್ಟು ಆರು ಜನ ಸಚಿವರು ಜಿಲ್ಲೆಯವರೆ ಆಗಿದ್ದರು.

ಇಷ್ಟೊಂದು ಪ್ರಭಾವಶಾಲಿಯಾದ ಕಲಬುರಗಿ ಜಿಲ್ಲೆಗೆ ಪ್ರಥಮಬಾರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಅಲ್ಲದೆ ಹೈದರಾಬಾದ್ ಕರ್ನಾಟಕಕ್ಕೂ ಈ ಬಾರಿ ಸಂಪುಟದಲ್ಲಿ ಅನ್ಯಾಯವಾಗಿದೆ. ಬಿಜೆಪಿ ಹೈಕಮಾಂಡ್ ಇಲ್ಲಿನ ಜನರಿಗೆ ಅನ್ಯಾಯ ಮಾಡಿದೆ. ಬೀದರ್‌ಗೆ ಒಂದು ಮಂತ್ರಿ ಸ್ಥಾನ ಮಾತ್ರ ಹೊರತುಪಡಿಸಿದರೆ ಇನ್ನೆಲ್ಲಿಯೂ ಸ್ಥಾನಮಾನ ನೀಡಿಲ್ಲ ಎಂದು ಇಲ್ಲಿನ ಜನ ಕೆಂಡಕಾರುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ.

ಸಚಿವ ಸ್ಥಾನಕ್ಕಾಗಿ ಆಗ್ರಹಿಸಿ ಪ್ರತಿಭಟನೆ..

ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರು ಹಾಗೂ ಓರ್ವ ಎಂಎಲ್‌ಸಿ ಇದ್ದಾರೆ. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ್ ಕುಟುಂಬದ ಸದಸ್ಯ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಕೈ ತಪ್ಪಿದೆ. ಯಡಿಯೂರಪ್ಪ ಅವರ ಮಾತುಮೀರಿ ರೇವೂರ ಕುಟುಂಬ 2008ರ ಉಪ ಚುನಾವಣೆಯಲ್ಲಿ ಜೆಡಿಎಸ್​ಗೆ ಹೋಗಿಬಂದ ಹಿನ್ನಲೆ ಯಡಿಯೂರಪ್ಪ ಅವರಿಗೆ ಬೇಸರವಿದೆ. ಇದೆ ಕಾರಣಕ್ಕೆ ಅವರಿಗೆ ಸಚಿವಸ್ಥಾನ ತಪ್ಪಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಇನ್ನೊಂದಡೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಂಗ್ರೆಸ್ ಭದ್ರಕೋಟೆ ಒಡೆದು ಬಿಜೆಪಿ ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ ಇಬ್ಬರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಇದೀಗ ಅದೂ ಕೂಡಾ ಹುಸಿಯಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸಂಸದರಾಗಿ ಆಯ್ಕೆಯಾದ ಉಮೇಶ್ ಜಾಧವ್ ಅವರಿಗೆ ಕೇಂದ್ರದಲ್ಲಿ ಸ್ಥಾನಮಾನ ಸಿಕ್ಕಿರಲಿಲ್ಲದ ಕಾರಣ ರಾಜ್ಯ ಸಚಿವ ಸಂಪುಟದಲ್ಲಿಯಾದರೂ ಅವರ ಪುತ್ರ ಚಿಂಚೋಳಿಯ ಶಾಸಕ ಅವಿನಾಶ್ ಜಾಧವ್ ಅವರಿಗೆ ಸಚಿವ ಸ್ಥಾನ ದೊರಕಬಹುದು ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದೆ.

ಕಲಬುರ್ಗಿ ಮಾತ್ರವಲ್ಲ ಇಡೀ ಹೈದರಾಬಾದ್ ಕರ್ನಾಟಕವನ್ನೇ ಯಡಿಯೂರಪ್ಪ ಕಡೆಗಣಿಸಿದ್ದಾರೆ. ಎರಡನೇ ಪಟ್ಟಿಯಲ್ಲಾದ್ರೂ ಈ ಭಾಗಕ್ಕೆ ಆದ್ಯತೆ ಸಿಗಬಹುದಾ ಎಂದು ಕಾಯ್ದು ನೋಡಬೇಕಾಗಿದೆ.

Intro:ಒಂದು ಕಾಲವಿತ್ತು ಈ ಜಿಲ್ಲೆಯೊಂದಕ್ಕೆ ಆರು ಸಚಿವ ಸ್ಥಾನಗಳು ಒಲಿದು ಬಂದಿದ್ದವು. ಅಲ್ಲದೆ ರಾಜ್ಯದಲ್ಲಿ ಯಾವುದೆ ಪಕ್ಷ ಆಢಳಿತಕ್ಕೆ ಬಂದರೂ ಈ ಜಿಲ್ಲೆಗೆ ಸಚಿವ ಸ್ಥಾನ ತಪ್ಪಿರಲಿಲ್ಲ ಆದ್ರೆ ಸ್ವಂತತ್ರ ನಂತರ ಪ್ರಥಮಬಾರಿಗೆ ಈ ಜಿಲ್ಲೆಗೆ ಸಚಿವ ಸ್ಥಾನ ವಂಚಿತವಾಗಿದೆ. ಅದ್ಯಾಕೋ ಬಿಎಸ್ವೈಗೆ ಈ ಜಿಲ್ಲೆ ಮೇಲೆ ಈ ಬಾರಿ ಒಲವು ಕಂಡುಬಂದಿಲ್ಲ, ಇದು ಈ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ‌.

ರಾಜ್ಯದಲ್ಲಿ ಯಾವುದೆ ಪಕ್ಷ ಆಢಳಿತಕ್ಕೆ ಬಂದರೂ ಬಿಸಿಲು ನಾಡು ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಪಿಕ್ಷ್ಸ್ ಎಂಬ ಮಾತು ಹಿಂದಿನಿಂದಲೂ ಇದೆ. ಸ್ವತಂತ್ರ ಬಂದಾಗಿನಿಂದ ಇಲ್ಲವರೆಗೆ ಸಚಿವ ಸ್ಥಾನ ಕೈತಪ್ಪಿಲ್ಲ, ಅಲ್ಲದೆ ಹಿಂದೆ 1999 ರಿಂದ 2004ರ ತನಕ ಎಸ್ಎಮ್ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎನ್.ಧರ್ಮಸಿಂಗ್, ಬಾಬುರಾವ ಚಿಂಚನಸೂರ, ಬಾಬುರಾವ ಚೌವ್ಹಾಣ, ಎ.ಬಿ ಮಾಲಕರೆಡ್ಡಿ ಮತ್ತು ಖಮರುಲ್ ಇಸ್ಲಾಂ ಒಟ್ಟು ಆರು ಜನ ಸಚಿವರು ಕಲಬುರಗಿ ಜಿಲ್ಲೆಯವರೆಯಾಗಿದ್ದರು. ಇಷ್ಟೊಂದು ಪ್ರಭಾವಶಾಲಿಯಾದ ಕಲಬುರಗಿ ಜಿಲ್ಲೆಗೆ ಪ್ರಥಮಬಾರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಮಾತ್ರವಲ್ಲ ಇಡಿ ಹೈದ್ರಾಬಾದ್ ಕರ್ನಾಟಕಕ್ಕೂ ಈ ಬಾರಿ ಸಂಪೂಟದಲ್ಲಿ ಅನ್ಯಾಯವಾಗಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಬಿಜೆಪಿಯ ಹೈಕಮಾಂಡ್ ಇಲ್ಲಿನ ಜನರಿಗೆ ಅನ್ಯಾಯ ಮಾಡಿವೆ. ಹೈದ್ರಾಬಾದ್ ಕರ್ನಾಟಕದ ಬೀದರ್ ಗೆ ಒಂದು ಮಂತ್ರಿ ಸ್ಥಾನ ಮಾತ್ರ ಹೊರತುಪಡಿಸಿದರೆ ಇನ್ನೆಲ್ಲಿಯೂ ಸ್ಥಾನಮಾನ ನೀಡಿಲ್ಲ ಎಂದು ಇಲ್ಲಿನ ಜನ ಕೆಂಡಕಾರುತ್ತಿದ್ದರೆ. ಯಡಿಯೂರಪ್ಪನವರ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದ ಜನರೇ ಈಗ ಯಡಿಯೂರಪ್ಪ ವಿರುದ್ಧ ಸಿಡಿದೆದ್ದು ನಿಂತಿದ್ದು, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಕೊಡಿ ಎಂದು ಆವಾಜ್ ಹಾಕಿದ್ದಾರೆ.

ಬೈಟ್ ಎಮ್.ಎಸ್‌.ಪಾಟೀಲ್ ನರಿಬೋಳ (ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಕಲಬುರಗಿ)

ಸದ್ಯ ಕಲಬುರಗಿ ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರು ಹಾಗೂ ಓರ್ವ ಎಂಎಲ್ ಸಿ ಇದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಕಟ್ಟಿ ಬೆಳಸುವಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ್ ಕುಟುಂಬದ ಸದಸ್ಸ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಸಚಿವ ಸ್ಥಾನ ಪಿಕ್ಸ್ ಎನ್ನಲಾಗುತ್ತಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಕೈ ತಪ್ಪಿದೆ. ಯಡಿಯೂರಪ್ಪ ಅವರ ಮಾತುಮೀರಿ ರೇವೂರ ಕುಟುಂಬ 2008ರ ಉಪ ಚುನಾವಣೆಯಲ್ಲಿ ಜೆಡಿಎಸ್ ಹೋಗಿಬಂದ ಹಿನ್ನಲೆ ಯಡಿಯೂರಪ್ಪ ಅವರಿಗೆ ಬೆಸರ ಇದೆ. ಇದೆ ಕಾರಣಕ್ಕೆ ಅವರಿಗೆ ಸಚಿವಸ್ಥಾನ ತಪ್ಪಿದೆ ಎಂದು ಜನ ಮಾತನಾಡುತ್ತಿದ್ದಾರೆ. ಇನ್ನೊಂದಡೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಂಗ್ರೆಸ್ ಭದ್ರಕೋಟೆ ಒಡೆದು ಬಿಜೆಪಿ ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ ಇಬ್ಬರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನವನ್ನು ಬರುವ ನಿರೀಕ್ಷೆ ಇತ್ತು ಆದರೆ ಇದೀಗ ಅದು ಕೂಡಾ ಹುಸಿಯಾಗಿದೆ.

ಬೈಟ್ 2: ಲಕ್ಷ್ಮಣ ದಸ್ತಿ (ಹಿರಿಯ ಹೋರಾಟಗಾರರು)

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸಂಸದರಾಗಿ ಆಯ್ಕೆಯಾದ ಉಮೇಶ್ ಜಾದವ್ ಅವರಿಗೆ ಕೇಂದ್ರದಲ್ಲಿ ಸ್ಥಾನಮಾನ ಸಿಕ್ಕಿರಲಿಲ್ಲದ ಕಾರಣ ರಾಜ್ಯ ಸಚಿವ ಸಂಪುಟದಲ್ಲಿಯಾದರೂ ಅವರ ಪುತ್ರ ಚಿಂಚೋಳಿಯ ಶಾಸಕ ಅವಿನಾಶ್ ಜಾಧವ್ ಅವರಿಗೆ ಸಚಿವ ಸ್ಥಾನ ದೊರಕಬಹುದು ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದೆ. ಒಟ್ಟಾರೆ ಕಲಬುರ್ಗಿ ಮಾತ್ರವಲ್ಲ ಇಡೀ ಹೈದರಾಬಾದ್ ಕರ್ನಾಟಕವನ್ನೆ ಯಡಿಯೂರಪ್ಪ ಕಡೆಗಣಿಸಿದ್ದಾರೆ. ಎರಡನೇ ಪಟ್ಟಿಯಲ್ಲಾದ್ರೂ ಈ ಭಾಗಕ್ಕೆ ಆದ್ಯತೆ ಸಿಗಬಹುದು ಎಂದು ಕಾಯ್ದು ನೋಡಬೇಕಾಗಿದೆ.
Body:ಒಂದು ಕಾಲವಿತ್ತು ಈ ಜಿಲ್ಲೆಯೊಂದಕ್ಕೆ ಆರು ಸಚಿವ ಸ್ಥಾನಗಳು ಒಲಿದು ಬಂದಿದ್ದವು. ಅಲ್ಲದೆ ರಾಜ್ಯದಲ್ಲಿ ಯಾವುದೆ ಪಕ್ಷ ಆಢಳಿತಕ್ಕೆ ಬಂದರೂ ಈ ಜಿಲ್ಲೆಗೆ ಸಚಿವ ಸ್ಥಾನ ತಪ್ಪಿರಲಿಲ್ಲ ಆದ್ರೆ ಸ್ವಂತತ್ರ ನಂತರ ಪ್ರಥಮಬಾರಿಗೆ ಈ ಜಿಲ್ಲೆಗೆ ಸಚಿವ ಸ್ಥಾನ ವಂಚಿತವಾಗಿದೆ. ಅದ್ಯಾಕೋ ಬಿಎಸ್ವೈಗೆ ಈ ಜಿಲ್ಲೆ ಮೇಲೆ ಈ ಬಾರಿ ಒಲವು ಕಂಡುಬಂದಿಲ್ಲ, ಇದು ಈ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ‌.

ರಾಜ್ಯದಲ್ಲಿ ಯಾವುದೆ ಪಕ್ಷ ಆಢಳಿತಕ್ಕೆ ಬಂದರೂ ಬಿಸಿಲು ನಾಡು ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಪಿಕ್ಷ್ಸ್ ಎಂಬ ಮಾತು ಹಿಂದಿನಿಂದಲೂ ಇದೆ. ಸ್ವತಂತ್ರ ಬಂದಾಗಿನಿಂದ ಇಲ್ಲವರೆಗೆ ಸಚಿವ ಸ್ಥಾನ ಕೈತಪ್ಪಿಲ್ಲ, ಅಲ್ಲದೆ ಹಿಂದೆ 1999 ರಿಂದ 2004ರ ತನಕ ಎಸ್ಎಮ್ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎನ್.ಧರ್ಮಸಿಂಗ್, ಬಾಬುರಾವ ಚಿಂಚನಸೂರ, ಬಾಬುರಾವ ಚೌವ್ಹಾಣ, ಎ.ಬಿ ಮಾಲಕರೆಡ್ಡಿ ಮತ್ತು ಖಮರುಲ್ ಇಸ್ಲಾಂ ಒಟ್ಟು ಆರು ಜನ ಸಚಿವರು ಕಲಬುರಗಿ ಜಿಲ್ಲೆಯವರೆಯಾಗಿದ್ದರು. ಇಷ್ಟೊಂದು ಪ್ರಭಾವಶಾಲಿಯಾದ ಕಲಬುರಗಿ ಜಿಲ್ಲೆಗೆ ಪ್ರಥಮಬಾರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಮಾತ್ರವಲ್ಲ ಇಡಿ ಹೈದ್ರಾಬಾದ್ ಕರ್ನಾಟಕಕ್ಕೂ ಈ ಬಾರಿ ಸಂಪೂಟದಲ್ಲಿ ಅನ್ಯಾಯವಾಗಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಬಿಜೆಪಿಯ ಹೈಕಮಾಂಡ್ ಇಲ್ಲಿನ ಜನರಿಗೆ ಅನ್ಯಾಯ ಮಾಡಿವೆ. ಹೈದ್ರಾಬಾದ್ ಕರ್ನಾಟಕದ ಬೀದರ್ ಗೆ ಒಂದು ಮಂತ್ರಿ ಸ್ಥಾನ ಮಾತ್ರ ಹೊರತುಪಡಿಸಿದರೆ ಇನ್ನೆಲ್ಲಿಯೂ ಸ್ಥಾನಮಾನ ನೀಡಿಲ್ಲ ಎಂದು ಇಲ್ಲಿನ ಜನ ಕೆಂಡಕಾರುತ್ತಿದ್ದರೆ. ಯಡಿಯೂರಪ್ಪನವರ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದ ಜನರೇ ಈಗ ಯಡಿಯೂರಪ್ಪ ವಿರುದ್ಧ ಸಿಡಿದೆದ್ದು ನಿಂತಿದ್ದು, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಕೊಡಿ ಎಂದು ಆವಾಜ್ ಹಾಕಿದ್ದಾರೆ.

ಬೈಟ್ ಎಮ್.ಎಸ್‌.ಪಾಟೀಲ್ ನರಿಬೋಳ (ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಕಲಬುರಗಿ)

ಸದ್ಯ ಕಲಬುರಗಿ ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರು ಹಾಗೂ ಓರ್ವ ಎಂಎಲ್ ಸಿ ಇದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ಕಟ್ಟಿ ಬೆಳಸುವಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ್ ಕುಟುಂಬದ ಸದಸ್ಸ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಸಚಿವ ಸ್ಥಾನ ಪಿಕ್ಸ್ ಎನ್ನಲಾಗುತ್ತಿತ್ತು. ಆದ್ರೆ ಕೊನೆಗಳಿಗೆಯಲ್ಲಿ ಕೈ ತಪ್ಪಿದೆ. ಯಡಿಯೂರಪ್ಪ ಅವರ ಮಾತುಮೀರಿ ರೇವೂರ ಕುಟುಂಬ 2008ರ ಉಪ ಚುನಾವಣೆಯಲ್ಲಿ ಜೆಡಿಎಸ್ ಹೋಗಿಬಂದ ಹಿನ್ನಲೆ ಯಡಿಯೂರಪ್ಪ ಅವರಿಗೆ ಬೆಸರ ಇದೆ. ಇದೆ ಕಾರಣಕ್ಕೆ ಅವರಿಗೆ ಸಚಿವಸ್ಥಾನ ತಪ್ಪಿದೆ ಎಂದು ಜನ ಮಾತನಾಡುತ್ತಿದ್ದಾರೆ. ಇನ್ನೊಂದಡೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಂಗ್ರೆಸ್ ಭದ್ರಕೋಟೆ ಒಡೆದು ಬಿಜೆಪಿ ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ ಇಬ್ಬರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನವನ್ನು ಬರುವ ನಿರೀಕ್ಷೆ ಇತ್ತು ಆದರೆ ಇದೀಗ ಅದು ಕೂಡಾ ಹುಸಿಯಾಗಿದೆ.

ಬೈಟ್ 2: ಲಕ್ಷ್ಮಣ ದಸ್ತಿ (ಹಿರಿಯ ಹೋರಾಟಗಾರರು)

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸಂಸದರಾಗಿ ಆಯ್ಕೆಯಾದ ಉಮೇಶ್ ಜಾದವ್ ಅವರಿಗೆ ಕೇಂದ್ರದಲ್ಲಿ ಸ್ಥಾನಮಾನ ಸಿಕ್ಕಿರಲಿಲ್ಲದ ಕಾರಣ ರಾಜ್ಯ ಸಚಿವ ಸಂಪುಟದಲ್ಲಿಯಾದರೂ ಅವರ ಪುತ್ರ ಚಿಂಚೋಳಿಯ ಶಾಸಕ ಅವಿನಾಶ್ ಜಾಧವ್ ಅವರಿಗೆ ಸಚಿವ ಸ್ಥಾನ ದೊರಕಬಹುದು ಎಂಬ ನಿರೀಕ್ಷೆ ಕೂಡಾ ಹುಸಿಯಾಗಿದೆ. ಒಟ್ಟಾರೆ ಕಲಬುರ್ಗಿ ಮಾತ್ರವಲ್ಲ ಇಡೀ ಹೈದರಾಬಾದ್ ಕರ್ನಾಟಕವನ್ನೆ ಯಡಿಯೂರಪ್ಪ ಕಡೆಗಣಿಸಿದ್ದಾರೆ. ಎರಡನೇ ಪಟ್ಟಿಯಲ್ಲಾದ್ರೂ ಈ ಭಾಗಕ್ಕೆ ಆದ್ಯತೆ ಸಿಗಬಹುದು ಎಂದು ಕಾಯ್ದು ನೋಡಬೇಕಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.