ETV Bharat / state

ಕಾಲೇಜಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ನವ ವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆ - ಸಂಜೆಯಾದ್ರೂ ಮನೆಯ ಬಾರದ ಹಿನ್ನೆಲೆ

ಕಾಲೇಜಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ನವ ವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Newly married woman body found  Newly married woman body found in Kalaburagi  Woman dead body found in river  ನಾಪತ್ತೆಯಾಗಿದ್ದ ನವ ವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆ  ಕಾಲೇಜಿಗೆ ಹೋಗುವುದಾಗಿ ಹೇಳಿ ನಾಪತ್ತೆ  ನವವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆ  ಸಂಜೆಯಾದ್ರೂ ಮನೆಯ ಬಾರದ ಹಿನ್ನೆಲೆ  ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ
ಕಾಲೇಜಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ನವ ವಿವಾಹಿತೆ ನದಿಯಲ್ಲಿ ಶವವಾಗಿ ಪತ್ತೆ
author img

By

Published : Dec 17, 2022, 1:26 PM IST

ಕಲಬುರಗಿ: ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ನಡೆದಿದೆ. ಮೃತರನ್ನು ನಾವದಗಿ ಗ್ರಾಮದ ಸೃಷ್ಟಿ‌ ಮಾರುತಿ (21) ಎಂದು ಗುರುತಿಸಲಾಗಿದೆ.

ಡಿಗ್ರಿ ಐದನೇಯ ಸೇಮಿಸ್ಟರ್‌ನಲ್ಲಿ ಓದುತ್ತಿದ್ದ ಸೃಷ್ಟಿಗೆ ಇತ್ತೀಚೆಗೆ ಮದುವೆಯಾಗಿತ್ತು. ಅತ್ತೆಯ ಮನೆಯಲ್ಲಿದ್ದೇ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದರು. ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಗಂಡ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡು ಗ್ರಾಮವೆಲ್ಲ ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಸಂಬಂಧಿಕರಿಗೆ ಮತ್ತು ಸೃಷ್ಟಿ ಗೆಳತಿಯರಿಗೆ ಫೋನ್​ ಮಾಡಿ ವಿಚಾರರಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸೃಷ್ಟಿ ಗಂಡನ ಕುಟುಂಬಸ್ಥರು ಡಿಸೆಂಬರ್​ 14ರ ಬೆಳಗ್ಗೆ ಮಹಾಗಾಂವ್​ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ಸೃಷ್ಟಿ ಕುರಿಕೋಟಾ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಹಾಗಾಂವ್​ ಪೊಲೀಸರು ಪರೀಶಿಲನೆ‌ ನಡೆಸಿ, ತನಿಖೆ ಆರಂಭಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದರು. ತನಿಖೆ ನಂತರವಷ್ಟೇ ಆತ್ಮಹತ್ಯೆ ಅಥವಾ ಇನ್ನೇನಾದ್ರೂ ನಡೆದಿದೆಯಾ ಎಂಬುದು ತಿಳಿದುಬರಬೇಕಿದೆ.

ಓದಿ: ನವದಂಪತಿ ಪ್ರವಾಸದ ವೇಳೆ ದುರಂತ.. ಸ್ಟ್ರೆಚರ್​​ನಲ್ಲಿದ್ದೇ ಗಂಡನ ಮುಖ ಸವರಿದ ಪತ್ನಿ.. ಗ್ರಾಮಸ್ಥರ ಕಂಬನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.