ETV Bharat / state

ರಾಜ್ಯವನ್ನು ಕಾಂಗ್ರೆಸ್‌ಮುಕ್ತ ಮಾಡುವತ್ತ ಜನರು ಒಲವು ತೋರಿಸಿದ್ದಾರೆ: ಕಟೀಲ್

ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಅಸಾಧ್ಯ ಅನ್ನೋದನ್ನು ಅರಿತ ಜನತೆ‌ ರಾಜ್ಯವನ್ನು ಕಾಂಗ್ರೆಸ್‌ಮುಕ್ತ ಮಾಡುವತ್ತ ಒಲವು ತೋರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಹೇಳಿದ್ದಾರೆ.‌

nalin-kumar-katil
ನಳೀನ್​ ಕುಮಾರ್​ ಕಟೀಲ್
author img

By

Published : Sep 9, 2021, 4:42 PM IST

Updated : Sep 9, 2021, 5:44 PM IST

ಕಲಬುರಗಿ: ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ಟವೆಲ್ ಹಾಕುತ್ತಿದ್ದರು. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಜನರು ಟವೆಲ್ ತೆಗೆದು ಹಾಕಿದರು ಎಂದು ನಳೀನ್​ ಕುಮಾರ್​ ಕಟೀಲ್ ವ್ಯಂಗ್ಯವಾಡಿದರು.‌

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್

ಕಲಬುರಗಿಯಲ್ಲಿ ಹಮ್ಮಿಕೊಂಡ ಪಾಲಿಕೆಯ ನೂತನ ಬಿಜೆಪಿ‌ ಸದಸ್ಯರಿಗೆ ಅಭಿನಂದನಾ‌ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಲೋಕಸಭಾ ಚುನಾವಣೆಯ ಸೋಲಿನ ನಂತರ ಕಲಬುರಗಿಗೆ ಬಾರದ ಮಲ್ಲಿಕಾರ್ಜುನ ಖರ್ಗೆ, ಇನ್ನು ಮುಂದೆ ಬರುವುದೇ ಬೇಡ. ಬೆಂಗಳೂರಿನಲ್ಲಿಯೇ ಇರಲಿ ಎಂಬ ಸಂದೇಶವನ್ನು ಇಲ್ಲಿನ ಜನರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮಾಜಿ‌ ಸಿಎಂ ಬಿಎಸ್​ವೈ ಹಾಗೂ ಸಿಎಂ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಪಾಲಿಕೆ ಚುನಾವಣೆಯಲ್ಲಿ ಗೆಲುವಾಗಿದೆ. ಕಲಬುರಗಿ ಜನರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಮುಂದಿನ ಮೇಯರ್ ಕೂಡ ನಾವೇ ಆಗ್ತೀವಿ. ಭ್ರಷ್ಟಾಚಾರರಹಿತ ಆಡಳಿತವನ್ನು ನಾವು ನೀಡುತ್ತೇವೆ ಎಂದು ಕಟೀಲ್ ಭರವಸೆ ನೀಡಿದರು.

Last Updated : Sep 9, 2021, 5:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.