ETV Bharat / state

ಅಪಘಾತದಲ್ಲಿ ಗಾಯಗೊಂಡ ಮಹಿಳೆ.. ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಂಸದ - ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ‌ ನೆರವಾದ ಸಂಸದ ಜಾಧವ್​

ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಮಹಿಳೆಯನ್ನು ಸಂಸದ ಉಮೇಶ ಜಾಧವ್ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

MP Umesh jadhav helped a woman who injured in accident
ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ‌ ತಮ್ಮ ಕಾರಿನಲ್ಲೇ ಆಸ್ಪತ್ರೆ ಸೇರಿಸಿದ ಸಂಸದ ಜಾಧವ್
author img

By

Published : Jun 12, 2022, 7:07 PM IST

Updated : Jun 12, 2022, 7:51 PM IST

ಕಲಬುರಗಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಮಹಿಳೆಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಸಂಸದ ಉಮೇಶ ಜಾಧವ್ ಮಾನವೀಯತೆ ತೋರಿದ್ದಾರೆ. ಜಿಲ್ಲೆಯ ಶಹಾಬಾದ್ ಬಳಿ ಕಾರು ಅಪಘಾತ ಸಂಭವಿಸಿ ಮಹಿಳೆಯ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿತ್ತು.

MP Umesh jadhav helped a woman who injured in accident
ಮಹಿಳೆಗೆ ನೆರವಾದ ಸಂಸದ ಉಮೇಶ ಜಾಧವ್

ಇದೇ ರಸ್ತೆ ಮೂಲಕ ಸಮಾವೇಶದಲ್ಲಿ ಭಾಗಿಯಾಗಲು ಸಂಸದ ಜಾಧವ್ ನಾಲವಾರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮದ್ಯೆ ಅಪಘಾತದ ದೃಶ್ಯ ಕಂಡು ಕಾರು ನಿಲ್ಲಿಸಿ, ಗಾಯಾಳು ಮಹಿಳೆಗೆ ತಮ್ಮ ಕಾರಿನಲ್ಲೇ ಕಲಬುರಗಿಗೆ ಕರೆತಂದು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ನೆರವಾದ ಸಂಸದರು

ಸಮಾವೇಶಕ್ಕೆ ತೆರಳುವುದನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮಹಿಳೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂಸದರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ವೈದ್ಯರಾಗಿರುವ ಸಂಸದ ಜಾಧವ್​​ ಈ ಹಿಂದೆಯೂ ಕೂಡ ಅನೇಕರಿಗೆ ನೆರವಾಗಿದ್ದಾರೆ.

ಇದನ್ನೂ ಓದಿ: ಬಿಸಿಯೂಟದ ಅಕ್ಕಿ ಕದ್ದೊಯ್ಯುತ್ತಿದ್ದ ಆರೋಪ.. ಶಾಲೆಯ ಮುಖ್ಯ ಶಿಕ್ಷಕ ಅಮಾನತು

Last Updated : Jun 12, 2022, 7:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.