ಕಲಬುರಗಿ: ಪ್ರಿಯಾಂಕ್ ಖರ್ಗೆಯವರು ನೀಡಿದ ಪತ್ರದ ಮೇಲೆ ರಾಮರಾವ ಮಹಾರಾಜರ ಸಹಿ ಇದೆ ಎಂದು ಸಾಬೀತಾದರೆ ಇಂದೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸಂಸದ ಉಮೇಶ್ ಜಾಧವ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಏರ್ಪೋರ್ಟ್ಗೆ ಶ್ರೀ ಸೇವಾಲಾಲ್ ಮಹಾರಾಜರ ಹೆಸರು ಇಡಬೇಕೆಂದು ರಾಮರಾವ ಮಹಾರಾಜರು ಪತ್ರ ಬರೆದಿಲ್ಲ. ಪ್ರಿಯಾಂಕ್ ಖರ್ಗೆ ರಾಮರಾವ ಮಹಾರಾಜರು ಸಹಿ ಮಾಡಿದ್ದ ಪತ್ರ ನೀಡಿದ್ದಾರೆ. ಆದರೆ, ಅವರು ನೀಡಿರುವ ಪತ್ರ ನಕಲಿ ಇದೆ. ಪತ್ರದ ಮೇಲೆ ರಾಮರಾವ ಮಹಾರಾಜರ ಸಹಿ ಇರುವುದು ಸಾಬೀತಾದರೆ ಇಂದೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿದ್ದಾರೆ.
ಸುಖಾಸುಮ್ಮನೇ ಅಪಪ್ರಚಾರ ಆರೋಪ
ಪ್ರಿಯಾಂಕ್ ಖರ್ಗೆ ಹತಾಶರಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಚಿಂಚೋಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನನ್ನ ಬಗ್ಗೆ ಅಪಪ್ರಾಚಾರ ಮಾಡುತ್ತಿದ್ದಾರೆ. ಖರ್ಗೆ ಹಿಂದೆ ಅವರ ತಂದೆಯವರ ದೊಡ್ಡ ಬ್ಯಾನರ್ ಇದೆ. ನನ್ನ ಹಿಂದೆ ಯಾವುದೇ ಬ್ಯಾನರ್ ಇಲ್ಲ. ನಾನು 20ರಿಂದ 25 ಕೋಟಿ ಹಣ ಪಡೆದು ಪಕ್ಷಕ್ಕೆ ಹೋಗಿದ್ದಾರೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ನಾನು ಹಣ ಪಡೆದು ಬಿಜೆಪಿಗೆ ಸೇರ್ಪಡೆಯಾಗಿದ್ದರೆ ಲೋಕಸಭೆ ಉಪಚುನಾಣೆ ಮತ್ತು ಚಿಂಚೋಳಿ ವಿಧಾನಸಭೆ ಚುನಾವಣೆಯಲ್ಲಿ ಜನ ಯಾಕೆ ಗೆಲ್ಲಿಸುತ್ತಿದ್ದರು, ಪ್ರಿಯಾಂಕ್ ಅವರು ಅಪಪ್ರಚಾರ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಣ ಪಡೆದಿರುವ ದಾಖಲೆ ಇದ್ರೆ ಕೊಡಿ ಎಂದು ಕಿಡಿಕಾರಿದರು.
ಇಂದಿರಾಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಗುರು. ರಾಜಕೀಯಕ್ಕೆ ಇವರನ್ನು ಪರಿಚಯಿಸಿದ್ದೇ ಇಂದಿರಾಗಾಂಧಿಯವರು. ಆದರೆ, ಖರ್ಗೆಯವರು ಇಂದಿರಾ ಗಾಂಧಿಗೆ ಮೋಸ ಮಾಡಿ 1963ರಲ್ಲಿ ಕಾಂಗ್ರೆಸ್ ತೊರೆದು ದೇವರಾಜ ಅರಸ್ ಜೊತೆ ಹೋಗಿದ್ದರು. ಅಂದು ಖರ್ಗೆ ಅವರು ಎಷ್ಟು ಹಣ ಪಡೆದು ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿದ್ದರು ಎಂದು ಪ್ರಿಯಾಂಕ್ ಖರ್ಗೆಗೆ ಸಂಸದರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬ್ರಿಟನ್ನಿಂದ ಬೆಂಗಳೂರಿಗೆ ಬಂದ ಯುವಕನಿಗೆ ಕೋವಿಡ್ ಪಾಸಿಟಿವ್