ETV Bharat / state

10 ವರ್ಷಗಳಿಂದ ಖಾಕಿ ಪಡೆಗೆ ಚಳ್ಳೆಹಣ್ಣು ತಿನ್ನಿಸಿದ್ದ ಖತರ್ನಾಕ್​​ ಕಳ್ಳನ ಬಂಧಿಸಿದ ಕಲಬುರಗಿ ಪೊಲೀಸರು - ಖತರ್ನಾಕ್​​ ಕಳ್ಳನ ಬಂಧಿಸಿದ ಕಲಬುರಗಿ ಪೊಲೀಸರು

ಬಂಧಿತ ಆರೋಪಿ ಬೀದರ್, ಕಲಬುರಗಿ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ವಾಸ ಮಾಡುತ್ತಿದ್ದ. ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದಲ್ಲಿ ಮನೆಗಳ್ಳತನ ಪ್ರಕರಣ ಸೇರಿದಂತೆ ಒಟ್ಟು 13 ಪ್ರಮುಖ ಕಳ್ಳತನ ಪ್ರಕರಣಗಳಲ್ಲಿ ಇತನೇ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ..

ಖತರ್ನಾಕ್​​ ಕಳ್ಳನ ಬಂಧಿಸಿದ ಕಲಬುರಗಿ ಪೊಲೀಸರು

author img

By

Published : Feb 6, 2022, 6:19 PM IST

ಕಲಬುರಗಿ : ಕಳೆದ ಹತ್ತು ವರ್ಷಗಳಿಂದ ಖಾಕಿ ಪಡೆಗೆ ಚಳ್ಳೆಹಣ್ಣು ತಿನ್ನಿಸುತ್ತ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಕಳ್ಳತನ, ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಜಗತ್ ಕಿಲಾಡಿಯನ್ನ ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಖತರ್ನಾಕ್​​ ಕಳ್ಳನ ಬಂಧಿಸಿದ ಕಲಬುರಗಿ ಪೊಲೀಸರು

ಬರೋಬ್ಬರಿ ಹತ್ತು ವರ್ಷಗಳಿಂದ ಕಲಬುರಗಿ ಜಿಲ್ಲಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತ, ಪೊಲೀಸರಿಲ್ಲದೇ ಸಾರ್ವಜನಿಕರ ನಿದ್ದೆಗೆಡಿಸಿದ್ದ ಖತರ್‌ನಾಕ್ ಕಳ್ಳನನ್ನ ಬಂಧಿಸಿದ್ದಾರೆ. ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದ ಚಂದ್ರಕಾಂತ ಅಲಿಯಾಸ್ ಚಂದ್ರ್ಯಾ ಎಂಬಾತನನ್ನ ಬೀದರ್ ರಾಜ್ಯ ಹೆದ್ದಾರಿಯ ಕುರಿಕೋಟ ಬ್ರಿಡ್ಜ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ 407 ಚಿನ್ನ, ಸಂಗಮೇಶ್ವರ ‌ದೇವರ ವಿಗ್ರಹ ಸೇರಿದಂತೆ ಏಳು ಕೆಜಿ ಬೆಳ್ಳಿ ಐವತ್ತು ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 25 ಲಕ್ಷ 90 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.

ಬಂಧಿತ ಆರೋಪಿ ಬೀದರ್, ಕಲಬುರಗಿ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ವಾಸ ಮಾಡುತ್ತಿದ್ದ. ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದಲ್ಲಿ ಮನೆಗಳ್ಳತನ ಪ್ರಕರಣ ಸೇರಿದಂತೆ ಒಟ್ಟು 13 ಪ್ರಮುಖ ಕಳ್ಳತನ ಪ್ರಕರಣಗಳಲ್ಲಿ ಇತನೇ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ.

ಈ ಖತರ್‌ನಾಕ್ ಕಳ್ಳನ ಹಿಸ್ಟರಿ ಇಷ್ಟಕ್ಕೆ ಮುಗಿಯಲ್ಲ. ಬರೀ ಕಳ್ಳತನ ಅಂತಾ ಅನ್ಕೊಂಡಿದ್ದ ಪೊಲೀಸರ ವಿಚಾರಣೆ ವೇಳೆ ಆರೋಪಿ ಚಂದ್ರಕಾಂತ್​​, 2008 ರಲ್ಲಿ ನಿಡಗುಂದ ಗ್ರಾಮದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೆಸ್ ಮುಖ್ಯ ಆರೋಪಿ ಕೂಡ ಹೌದು. ಇನ್ನೂ ಚಂದ್ರಕಾಂತ್​​ ಜೊತೆ ಪರಸ ಕಾಳೆ ಮತ್ತು ರಾಘವೇಂದ್ರ ಟೆಂಗಳಿ ಎಂಬ ಆರೋಪಿಗಳನ್ನ ಸಹ ಬಂಧಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.