ಸೇಡಂ (ಕಲಬುರಗಿ): ಪ್ರಧಾನಿ ಮೋದಿಯ ಅವರನ್ನು ಅವಹೇಳನ ಮತ್ತು ವ್ಯಂಗ್ಯವಾಗಿ ಬಿಂಬಿಸುವ ಚಿತ್ರವನ್ನು ವಾಟ್ಸಪ್ನಲ್ಲಿ ಹರಿಬಿಟ್ಟವರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ಒತ್ತಾಯಿಸಿದ್ದಾರೆ.

ಪಟ್ಠಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಂಎಲ್ಎ/ ಎಕ್ಸ್ ಎಂಎಲ್ಎ/ ಗವರ್ನಮೆಂಟ್ ಆಫೀಸರ್/ವಿಐಪಿಸ್ ಎಂಬ ವಾಟ್ಸಪ್ ಗ್ರೂಪ್ನ ಸದಸ್ಯರೊಬ್ಬರು ಮೋದಿ ಅವರನ್ನು ಅವಹೇಳನ ಮಾಡುವಂತಹ ಚಿತ್ರ ಹರಿಬಿಟ್ಟಿದ್ದಾರೆ. ಈ ಮೂಲಕ ಸಂವಿಧಾನಿಕವಾಗಿ ಚುನಾಯಿತ ಪ್ರತಿನಿಧಿಯ ಹೆಸರಿಗೆ ಚುತಿ ತರುವ ಕೆಲಸ ಮಾಡಿದ್ದಾರೆ. ಮೋದಿಯವರ ಚಿತ್ರವನ್ನು ತೀರಾ ಅವಹೇಳನವಾಗಿ ಬಿಂಬಿಸಿದ್ದು, ಅದನ್ನು ಹರಿಬಿಟ್ಟವರು, ಹಂಚಿಕೊಂಡವರು ಮತ್ತು ಗ್ರೂಪ್ ಅಡ್ಮಿನ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆಯವರು ಸೂಚಿತ ಮೊಬೈಲ್ ಸಂಖ್ಯೆಯ ವ್ಯಕ್ತಿ ಮತ್ತು ಇನ್ನುಳಿದ ಹಂಚಿಕೆದಾರರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.