ETV Bharat / state

ಪರಿಷತ್​ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್​ ಖರ್ಗೆ - ನ್ಯಾಷನಲ್​​ ಹೆರಾಲ್ಡ್​​ ಪ್ರಕರಣ

ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್​ ಎರಡು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಅವರ ಗೆಲುವು ವೈಯಕ್ತಿಕವಾದುದು, ಅದು ಬಿಜೆಪಿ ಗೆಲುವಲ್ಲ. ಬಿಜೆಪಿ ಗೆದ್ದಿರುವುದು ಕೇವಲ ಒಂದೇ ಸ್ಥಾನ ಎಂದು ಪ್ರಿಯಾಂಕ್​ ಖರ್ಗೆ ಹೇಳಿದರು.

mlc-election-results-is-warning-bell-to-state-bjp-government-says-congress-leader-priyank-kharge
ವಿಧಾನ ಪರಿಷತ್​ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್​ ಖರ್ಗೆ
author img

By

Published : Jun 16, 2022, 3:51 PM IST

Updated : Jun 16, 2022, 8:49 PM IST

ಕಲಬುರಗಿ: ವಿಧಾನ ಪರಿಷತ್​ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ. ಶಿಕ್ಷಕ ಮತ್ತು ಪದವೀಧರ ಮತದಾರರು ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ. ಹಿಜಾಬ್, ಆಜಾನ್ ಏನೇ ವಿವಾದ ಹುಟ್ಟುಹಾಕಿದರೂ ಕರ್ನಾಟಕದ ಮತದಾರರು ಉತ್ತರ ಪ್ರದೇಶದ ಮತದಾರರ ರೀತಿ ಅಲ್ಲ ಅನ್ನೋದು ಈ ಚುನಾವಣೆಯಿಂದ ಸಾಬೀತಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ನಾಲ್ಕು ಕೇತ್ರಗಳಲ್ಲಿ ಕಾಂಗ್ರೆಸ್​ ಎರಡು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಅವರ ಗೆಲುವು ವೈಯಕ್ತಿಕವಾದುದು, ಅದು ಬಿಜೆಪಿ ಗೆಲುವಲ್ಲ. ಬಿಜೆಪಿ ಗೆದ್ದಿರುವುದು ಕೇವಲ ಒಂದೇ ಸ್ಥಾನ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಮಧು ಮಾದೇಗೌಡರ ಗೆಲುವು ಬಹಳ ವಿಶೇಷವಾಗಿದೆ. ಕರ್ನಾಟಕದಲ್ಲಿ ಪ್ರಬುದ್ಧ ಮತದಾರರಿದ್ದಾರೆ ಎಂದರು.

ನ್ಯಾಷನಲ್​​ ಹೆರಾಲ್ಡ್​​ ಪ್ರಕರಣದಲ್ಲಿ ಯಾವುದೇ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿಲ್ಲ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಯಾವ ಸೆಕ್ಷನ್​ ಹಾಕಿದ್ದಾರೆ ಎಂದು ಹೇಳುತ್ತಿಲ್ಲ. ಆದರೂ, ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಅವರಿಗೆ ಸಮನ್ಸ್​​ ನೀಡಿ, ಅವರನ್ನು ವಿಚಾರಣೆಗೊಳಪಡಿಸಿ ದ್ವೇಷ ರಾಜಕೀಯ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನವರು ಅಸಹಾಯಕರು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್​, ಇಡಿ ವಿಚಾರಣೆಗೆ ರಾಹುಲ್ ಗಾಂಧಿ ಹಾಜರಾಗುತ್ತಿದ್ದಾರೆ. ಬಿಜೆಪಿಯ ಸ್ನೇಹಿತರಾದ ನೀರವ್​ ಮೋದಿ, ಲಲಿತ್​ ಮೋದಿ, ವಿಜಯ್​ ಮಲ್ಯ ರೀತಿಯ ರಾಹುಲ್​ ಗಾಂಧಿ ಅವರೇನು ವಿದೇಶಕ್ಕೆ ಹೋಗಿಲ್ಲ. ವಂಚನೆ ಮಾಡಿ ದೇಶ ಬಿಟ್ಟು ಹೋದವರನ್ನು ಕರೆತರುವ ಯೋಗ್ಯತೆ ಅಂತೂ ಈ ಸರ್ಕಾರಕ್ಕೆ ಇಲ್ಲ. ನಿಮಗೆ ದೇಶದ ಸಂಪತ್ತಿನ ಬಗ್ಗೆ ಅಷ್ಟು ಕಾಳಜಿ ಇದ್ದರೆ ಅಮಿತ್ ಶಾ ಮಗನ ಆಸ್ತಿ 15 ಸಾವಿರ ಪ್ರತಿಶತ ಹೆಚ್ಚಳವಾಗಿದೆ. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ?, ಈಶ್ವರಪ್ಪ ಪ್ರಕರಣ ಇಡಿಗೆ ಕೊಟ್ಟಿದ್ರಲ್ಲ, ಏನಾಯಿತು ಎಂದು ಟೀಕಿಸಿದರು.

ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಪ್ರತಿಭಟನೆ ಸಹ ಮಾಡಬಾರದಾ ನಾವು?. ನಾನು ವಿರೋಧ ಪಕ್ಷದಲ್ಲಿದುಕೊಂಡು ಭ್ರಷ್ಟಾಚಾರ, ಅಕ್ರಮಗಳ ವಿರುದ್ದ ಧ್ವನಿ ಎತ್ತುವುದು ನನ್ನ ಕರ್ತವ್ಯ. ಪಿಎಸ್ಐ ಅಕ್ರಮದ ಬಗ್ಗ ಧ್ವನಿ ಎತ್ತಬಾರದಾ?. ಪರ್ಸೆಂಟೇಜ್​ ಕೇಸಲ್ಲಿ ಈಶ್ವರಪ್ಪ ರಾಜೀನಾಮೆ ಕೊಟ್ಟಿಲ್ವಾ?. ಬಿಜೆಪಿಯವರು ನನ್ನ ಬಾಯಿ ಮುಚ್ಚಿಲು ಪ್ರಯತ್ನಿಸಿದರೆ ಹುಷಾರ್ ಎಂದು ಎಚ್ಚರಿಸಿದರು.

ಇದನ್ನೂ ಓದಿ: ರಾಜಭವನ ಮುತ್ತಿಗೆ ಯತ್ನ: ಸಿದ್ದರಾಮಯ್ಯ, ಡಿಕೆಶಿ ಸೇರಿ ಕೈ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Last Updated : Jun 16, 2022, 8:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.