ಸೇಡಂ: ಗೋಹತ್ಯೆ ನಿಷೇಧ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಿರುವುದನ್ನು ಸ್ವಾಗತಿಸಿರುವ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಹಿಂದೂಗಳ ಪೂಜ್ಯನೀಯ ಭಾವನೆಗೆ ಬೆಲೆ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಗೋಮಾತೆಯನ್ನು ಪೂಜಿಸುವ ಪದ್ಧತಿ ಇದೆ. ಗೋವನ್ನು ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ದೇಶದ 24 ರಾಜ್ಯಗಳಲ್ಲಿ ಗೋಹತ್ಯೆ ಹಾಗೂ ಮಾರಾಟ ನಿಷೇಧ ಕಾನೂನು ಜಾರಿಯಲ್ಲಿದೆ. ಈಗ ಕರ್ನಾಟಕದಲ್ಲೂ ಸಹ ಕಠಿಣ ಕಾನೂನು ಜಾರಿಗೆ ಮುಂದಾಗಿರುವುದು ಹಿಂದೂಗಳ ಭಾವನೆಗೆ ದೊರೆತ ನ್ಯಾಯ ಎಂದು ಅವರು ತಿಳಿಸಿದ್ದಾರೆ.
ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಗೋ ಆರಾಧಕರ ಬೇಡಿಕೆ ಈಡೇರಿದೆ- ಸದಾನಂದಗೌಡ
ಹಸುವಿನ ಉತ್ಪನ್ನಗಳು ವ್ಯಾಪಕವಾಗಿ ದೈವಿಕ ಕಾರ್ಯಗಳಲ್ಲಿ ಬಳಸಲ್ಪಡುತ್ತವೆ. ಗೋಹತ್ಯೆಯಿಂದ ಹಿಂದೂ ಭಾವನೆಗಳಿಗೆ ಹಾಗೂ ಪಾರಂಪರಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಅನೇಕ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿವೆ. ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಮಂಡಿಸಿದ್ದು ಮಸೂದೆ ಅಂಗೀಕರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಕಾರ್ಯಕ್ಕೆ ಕೈ ಜೋಡಿಸಿದ ಅವರು ರಾಷ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಹಾಗೂ ಎಲ್ಲ ಸಚಿವರಿಗೂ, ಶಾಸಕರಿಗೂ ಹಾಗೂ ಸರ್ಕಾರಕ್ಕೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತೇಲ್ಕೂರ ತಿಳಿಸಿದ್ದಾರೆ.