ETV Bharat / state

ಪಿಎಸ್ಐ ಹಗರಣ: ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ - ಸಚಿವ ಪ್ರಿಯಾಂಕ್​ ಖರ್ಗೆ - ಪಿಎಸ್ಐ ಅಕ್ರಮ ವಿಚಾರ

ಪಿಎಸ್ಐ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸಚಿವ ಪ್ರಿಯಾಂಕ್​ ಖರ್ಗೆ
ಸಚಿವ ಪ್ರಿಯಾಂಕ್​ ಖರ್ಗೆ
author img

By ETV Bharat Karnataka Team

Published : Nov 7, 2023, 3:22 PM IST

Updated : Nov 7, 2023, 3:45 PM IST

ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆ

ಕಲಬುರಗಿ: ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಬಿಡಿಸಲು ಖುದ್ದು ಬಿಜೆಪಿಯ ಹಾಲಿ ಶಾಸಕರೊಬ್ಬರು ಕರೆ ಮಾಡಿದ್ದರು. ಆದರೆ, ಈಗ ಕಾಂಗ್ರೆಸ್​ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಮುನ್ನ ಬಿಜೆಪಿ ನಾಯಕರು ಹೋಂವರ್ಕ್ ಮಾಡಿಕೊಂಡು ಬರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಆರ್.ಡಿ. ಪಾಟೀಲ್ ಇರಲಿ ಬೇರೆ ಯಾರೇ ಇರಲಿ, ತಪ್ಪು ಮಾಡಿದವರನ್ನು ಕಾಂಗ್ರೆಸ್​ ಸರ್ಕಾರ ಬಿಡುವುದಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಅಕ್ರಮದಲ್ಲಿ ಭಾಗಿಯಾದ 20ಕ್ಕೂ ಅಧಿಕ ಜನರನ್ನು ಬಂಧಿಸಿದ್ದೇವೆ. ಆರ್​ಡಿ ಪಾಟೀಲ್ ಅವ​ರನ್ನು ಕೂಡಾ ಶೀಘ್ರವೇ ಬಂಧಿಸುತ್ತೇವೆ. ಆರ್​ಡಿಪಿ ಇರುವ ಸ್ಥಳದ ಮಾಹಿತಿ ಸಿಕ್ಕಿದೆ ಕೂಡಲೇ ಬಂಧಿಸಲಾಗುವುದು. ಪೊಲೀಸ್​ ಅಧಿಕಾರಿಗಳು ಆರೋಪಿ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೂ ಆರ್ ಡಿ ಪಾಟೀಲ್ ತಪ್ಪಿಸಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಪಾತ್ರ ಇದ್ದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಪಾಟೀಲ್​ ತಪ್ಪಿಸಿಕೊಳ್ಳಲು ಅಧಿಕಾರಿಗಳ ಕೃಪಾಕಟಾಕ್ಷ ಇತ್ತೊ ಇಲ್ಲವೋ ಗೊತ್ತಿಲ್ಲ‌, ವಿಚಾರಣೆ ನಡೆಸುತ್ತೇವೆ. ಇದರಲ್ಲಿ ಅಧಿಕಾರಿಗಳ ಲೋಪ ಕಂಡಲ್ಲಿ ಕ್ರಮ ಖಂಡಿತ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂದುವರಿದು, ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ಇಷ್ಟು ಬಿಗಿ ಭದ್ರತೆ ನಡುವೆ ಪ್ರಾಮಾಣಿಕ ಪರೀಕ್ಷೆ ನಡೆಸಿದ್ದೇವೆ. ಹ್ಯಾಂಡ್​ ವೈಡ್​ ಡಿವೈಸರ್ ಅಳವಡಿಕೆ, 800 ಮೀಟರ್​ನಲ್ಲಿನ ಲಾಡ್ಜ್​ಗಳ ಪರಿಶೀಲನೆ. ವಾಹನ ಪಾರ್ಕಿಂಗ್​ ತಪಾಸಣೆ ಸೇರಿ ಹತ್ತು ಹಲವಾರು ಮುಂಜಾಗ್ರತಾ ಕ್ರಮ ಜರುಗಿಸಿದ್ದು, ಇದೆ ಪ್ರಥಮ ಬಾರಿ. ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ಅಕ್ರಮ ನಡೆದಾಗ ಸದನದಲ್ಲಿ ಅಕ್ರಮ ನಡೆದಿಲ್ಲ ಎಂದರು. ಮುಖ್ಯಮಂತ್ರಿ ಗೃಹಮಂತ್ರಿಗಳಿಗೆ ಭೇಟಿಯಾಗಲು ಅಭ್ಯರ್ಥಿಗಳು ಚಪ್ಪಲಿ ಹರಿದುಕೊಂಡು ಸುಸ್ತಾದ ಬಳಿಕ, ಏಳು ತಿಂಗಳ ನಂತರ ಅಕ್ರಮದ ಬಗ್ಗೆ ಒಪ್ಪಿಕೊಂಡರು.

ಆದರೆ, ನಾವು ಕೇವಲ 24 ತಾಸಿನಲ್ಲಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಮುಂಜಾಗ್ರತಾ ಕ್ರಮ ಜರುಗಿಸಿ ಸುಮ್ಮನೆ ಕುಳಿತಿಲ್ಲ, ಅಕ್ರಮ ನಡೆದಾಗ ಶೀಘ್ರವೇ ಕ್ರಮ ಕೈಗೊಂಡು ಅಕ್ರಮದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುತ್ತೇವೆ. ಅಕ್ರಮದ ಕುರಿತಾಗಿ ಸಿಎಂ ಹೋಂ ಮಿನಿಸ್ಟರ್ ಎಲ್ಲರೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅವರಂತೆ ಮೈಮೇಲೆ ಎಣ್ಣೆ ಹಾಕಿಕೊಂಡು ಕುಳಿತಿಲ್ಲ. ನಮ್ಮ ಜವಾಬ್ದಾರಿ ನಾವು ನಿಭಾಯಿಸುತ್ತಿದ್ದೇವೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ. ಅದನ್ನು ಬಿಟ್ಟು ಬಿಜೆಪಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಲಿ‌ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ನಿಗಮ ಮಂಡಳಿ ಪರೀಕ್ಷಾ ಅಕ್ರಮದ ನೈತಿಕ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಅಶ್ವತ್ಥನಾರಾಯಣ್ ಆಗ್ರಹ

Last Updated : Nov 7, 2023, 3:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.