ಕಲಬುರಗಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳನ್ನು ದೂಷಿಸೋದು ಸರಿಯಲ್ಲ. ಮೊದಲು ನಿಮ್ಮ ಪಾತ್ರವೇನು? ನೀವು ಏನು ಕೊಡ್ತಿದ್ದೀರಿ ಅನ್ನೋದನ್ನು ಅರ್ಥ ಮಾಡಿಕೊಳ್ಳಿ ಎಂದು ಕೇಂದ್ರದ ವಿರುದ್ಧ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಟೀಕಾಸಮರ ನಡೆಸಿದರು.
ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಿಗೆ ಮಾಡಲಾಗಿದೆ. ಸೆಸ್ ಹೆಚ್ಚಿಗೆ ಮಾಡಿದ್ರೆ ಆದಾಯ ಏನು ರಾಜ್ಯ ಸರ್ಕಾರಕ್ಕೆ ಬರುತ್ತಾ?. ಸೆಸ್ನಿಂದ ಬರುವ ಲಾಭವನ್ನು ಕೇಂದ್ರ ಸರ್ಕಾರದವರೇ ನುಂಗುತ್ತಾರೆ. ಸೆಸ್ ಬದಲಾಗಿ ಜಿಎಸ್‌ಟಿ ಹೆಚ್ಚಿಗೆ ಮಾಡಿದ್ರೆ ರಾಜ್ಯಕ್ಕೆ ಪಾಲು ಸಿಗ್ತಿತ್ತು. ಜಿಎಸ್‌ಟಿನಲ್ಲಿಯೂ ಸಿಗುವ ಪಾಲು ಸರಿಯಾಗಿ ರಾಜ್ಯಕ್ಕೆ ಕೇಂದ್ರದವರು ಕೊಡ್ತಿಲ್ಲ. ಎಲ್ಲವನ್ನೂ ತನ್ನ ಹತ್ತಿರ ಇಟ್ಟುಕೊಂಡು ಮತ್ತೊಬ್ಬರಿಗೆ ಉಪದೇಶ ಮಾಡ್ತಿದ್ದಾರೆ.
ಪಿಎಂ ಕೇರ್ ಫಂಡ್‌ನ ಲೆಕ್ಕ ಕೊಡ್ತಿಲ್ಲ. ಆರ್‌ಟಿಐದಿಂದಲೂ ಮಾಹಿತಿ ಪಡೆಯುವಂತಿಲ್ಲ. ಕೇಳಿದ್ರೆ ಇದು ಒಳಗಿನ ವಿಚಾರ ಅಂತಾರೆ. ಮೊದಲು ಪಿಎಂ ಕೇರ್ ಫಂಡ್ ಲೆಕ್ಕ ಕೊಡಿ ಎಂದು ಖರ್ಗೆ ಆಗ್ರಹಿಸಿದರು.
ಇದನ್ನೂ ಓದಿ: ಹಿಂದಿ ಎಂದ ಕೂಡಲೇ ಭೂತನೋ, ಸೈತಾನೋ ಎನ್ನುವಂತೆ ನೋಡ್ಬೇಡಿ.. ಶಾ ಹೇಳಿಕೆ ತಿರುಚಲಾಗುತ್ತಿದೆ : ಪ್ರತಾಪ್ ಸಿಂಹ