ETV Bharat / state

'ಪ್ರಭುದ್ದತೆ ಇಲ್ಲದ ನಾಯಕ ಯಾರಾದರೂ ಇದ್ರೆ ಅದು ರಾಹುಲ್ ಗಾಂಧಿ': ಜಗದೀಶ್ ಶೆಟ್ಟರ್ - Minister Jagadish Shettar

ಮೋದಿಗೆ ಪರ್ಯಾಯ ನಾಯಕ ಯಾರೂ ಇಲ್ಲ. ರಾಹುಲ್ ಗಾಂಧಿ ಅವರಿಗೆ ಯಾರಾದ್ರು ನಾಯಕ ಅಂತಾರಾ? ದೇಶದಲ್ಲಿ ಪ್ರಭುದ್ದತೆ ಇಲ್ಲದ ನಾಯಕ ಯಾರಾದ್ರು ಇದ್ರೆ ಅದು ರಾಹುಲ್ ಗಾಂಧಿ ಮಾತ್ರ ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

Minister Jagadish Shettar barraged against Rahul Gandhi
ರಾಹುಲ್ ಗಾಂಧಿ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ
author img

By

Published : Jan 12, 2021, 8:35 AM IST

ಕಲಬುರಗಿ: ಈ ದೇಶದಲ್ಲಿ ಪ್ರಭುದ್ದತೆ ಇಲ್ಲದ ನಾಯಕ ಯಾರಾದರೂ ಇದ್ರೆ ಅದು ರಾಹುಲ್ ಗಾಂಧಿ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ

ಕಲಬುರಗಿ ನಗರದ ಎನ್​ವಿ ಕಾಲೇಜು ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಅವರಿಗೆ ಪರ್ಯಾಯ ನಾಯಕ ಯಾರೂ ಇಲ್ಲ. ರಾಹುಲ್ ಗಾಂಧಿಯವರಿಗೆ ಯಾರಾದ್ರು ನಾಯಕ ಅಂತಾರಾ? ದೇಶದಲ್ಲಿ ಪ್ರಭುದ್ದತೆ ಇಲ್ಲದ ನಾಯಕ ರಾಹುಲ್ ಗಾಂಧಿ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ನಂತ್ರ ಕಾಂಗ್ರೆಸ್ ಅಧೋಗತಿಗೆ ಹೋಗಿದೆ. ಸೋತು ಸುಣ್ಣವಾದ ಮೇಲೆ ಸಂಕಲ್ಪ ಯಾತ್ರೆ ಮಾಡೋಕೆ ಕಾಂಗ್ರೆಸ್​​ನವರು ಹೊರಟಿದ್ದಾರೆ. ಮೊದಲೂ ಸಿದ್ಧರಾಮಯ್ಯ ಮತ್ತು ಡಿಕೆಶಿ ನೀವಿಬ್ಬರೂ ಒಂದಾಗಿ. ಆಮೇಲೆ ಕಾಂಗ್ರೆಸ್ ಸಂಕಲ್ಪ ಮಾಡಿ. ಕಾಂಗ್ರೆಸ್ ಕೆಳಗೆ ಪಾತಾಳಕ್ಕೆ ಹೋಗುತ್ತದೆ. ಮೋದಿ ಅವರ ಅಧಿಕಾರ ಅವಧಿಯಲ್ಲಿ ಒಂದಾದ್ರೂ ಕಪ್ಪು ಚುಕ್ಕೆಯಾಗಿದೆಯಾ? ಗ್ರಾಮ ಪಂಚಾಯಿತಿ ಸದಸ್ಯರೂ ಸಹ ಮೋದಿ ಅವರ ರೀತಿಯಲ್ಲಿ 24 ತಾಸು ಕೆಲಸ ಮಾಡಿ. ಗ್ರಾಮ ನಿಜವಾಗಲೂ ಸ್ವರಾಜ್ಯ ವಾಗೋದು ಖಚಿತ ಎಂದು ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಶೆಟ್ಟರ್ ಕರೆ ನೀಡಿದರು.

ಓದಿ: ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ : ಜಗದೀಶ್ ಶೆಟ್ಟರ್

ಸಮಾವೇಶದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಉಮೇಶ್ ಜಾಧವ್, ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ಅವಿನಾಶ್ ಜಾಧವ್, ಸುಭಾಷ್ ಗುತ್ತೆದಾರ್, ಬಸವರಾಜ್ ಮತ್ತಿಮೂಡ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.