ಸೇಡಂ (ಕಲಬುರಗಿ): ಪಟ್ಟಣದ ಸಣ್ಣ ಅಗಸಿ ಹಾಗೂ ರಂಜೋಳ ಗ್ರಾಮದಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸಣ್ಣ ಅಗಸಿ ಬಡಾವಣೆಯಲ್ಲಿ ಪ್ರತಿವರ್ಷವೂ ಮಧ್ಯರಾತ್ರಿ ಧ್ವಜಾರೋಹಣ ಮಾಡುವ ಪದ್ಧತಿಯಿದೆ. ಹಾಗಾಗಿ, ಶುಕ್ರವಾರ ರಾತ್ರಿಯೇ ಪಿಎಸ್ಐ ಸುಶೀಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಈ ವೇಳೆ ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡಿ, ಭಾರತೀಯರು ಸ್ವತಂತ್ರರಾಗಿ ಜೀವಿಸಲು ಅನೇಕ ಹೋರಾಟಗಾರರ ಅವಿರತ ಶ್ರಮ, ತ್ಯಾಗವೇ ಕಾರಣ. ಅಂತಹ ಪವಿತ್ರ ದಿನದಂದು ಮಹನೀಯರನ್ನು ನೆನೆಯುವ ಅವಶ್ಯಕತೆ ಇದೆ ಎಂದು ಹೇಳಿದರು.