ಕಲಬುರಗಿ: ಕೋವಿಡ್-19 ಪರೀಕ್ಷೆ ಕೈಗೊಳ್ಳುತ್ತಿರುವ ಜಿಮ್ಸ್ ಪ್ರಯೋಗಾಲಯ ನೀಡುವ ವೈದ್ಯಕೀಯ ವರದಿ ಅಂತಿಮವೆಂದು ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಪ್ರಯೋಗಾಲಯ ಆರಂಭವಾದ ನಂತರವೂ ಶಿಷ್ಟಾಚಾರದ ಪ್ರಕಾರ, ಬೆಂಗಳೂರು ಅಥವಾ ಪುಣೆಗೆ ಕಳುಹಿಸಲಾಗುತ್ತಿತ್ತು. ಇದೀಗ ಕಲಬುರಗಿ ಪ್ರಯೋಗಾಲಯವನ್ನ ಉನ್ನತೀಕರಿಸಿರುವುದರಿಂದ ದೃಢೀಕರಣಕ್ಕಾಗಿ ಬೇರೆ ಪ್ರಯೋಗಾಲಯಕ್ಕೆ ವರದಿ ಕಳುಹಿಸುವ ಅಗತ್ಯವಿಲ್ಲ ಎಂದು ಸಂಸದ ಜಾಧವ್ ಹೇಳಿದ್ದಾರೆ.
ಇನ್ನು, ಕೋವಿಡ್-19 ಪರೀಕ್ಷೆಗೆ ಅಗತ್ಯ ಪ್ರಮಾಣದಲ್ಲಿ ಕೆಮಿಕಲ್ ಸಹ ಲಭ್ಯವಿದೆ ಎಂದು ಸಂಸದರು ತಿಳಿಸಿದ್ದಾರೆ.