ETV Bharat / state

ಕಲಬುರಗಿ: ಸೋಂಕಿತರನ್ನು ಕರೆ ತರಲು ಹೋದ ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ! - kalaburagi news

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದ ಕೊರೊನಾ ಸೋಂಕಿತರನ್ನ ಕೋವಿಡ್-19 ಆಸ್ಪತ್ರೆಗೆ ಕರೆ ತರಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ತಾಂಡಾದ ಜನರು ಕಲ್ಲು ತೂರಾಟ ನಡೆಸಿದ್ದಾರೆ.

Maramanchi village people throw stones on Corona Warriors
ಸೋಂಕಿತರನ್ನು ಕರೆತರಲು ಹೋದ ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ..!
author img

By

Published : Jun 15, 2020, 4:53 PM IST

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದ ಜನರು ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸೋಂಕಿತರನ್ನು ಕರೆ ತರಲು ಹೋದ ಕೊರೊನಾ ವಾರಿಯರ್ಸ್‌ ಮೇಲೆ ಕಲ್ಲು ತೂರಾಟ!

ಮರಮಂಚಿ ತಾಂಡಾಕ್ಕೆ ಮಹಾರಾಷ್ಟ್ರದಿಂದ ವಾಪಸ್ ಬಂದಿದ್ದ 15 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆ ಸೋಂಕಿತರನ್ನ ಕೋವಿಡ್-19 ಆಸ್ಪತ್ರೆಗೆ ಕರೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿ ಆ್ಯಂಬುಲೆನ್ಸ್​ನಲ್ಲಿ ತೆರಳಿದ್ದರು. ಈ ವೇಳೆ ತಾಂಡಾದ ನಿವಾಸಿಗಳು ಏಕಾಏಕಿ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಆರೋಗ್ಯ ಸಿಬ್ಬಂದಿ ವಾಹನ ಬಿಟ್ಟು ಓಡಿ ಹೋಗಿದ್ದಾರೆ. ಆ್ಯಂಬುಲೆನ್ಸ್​ನ ಗಾಜುಗಳು ಪುಡಿ-ಪುಡಿಯಾಗಿವೆ.

ಅಷ್ಟೇ ಅಲ್ಲದೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್​ಪಿ ಭೇಟಿ ನೀಡಿ, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.