ETV Bharat / state

Just ನಾಲ್ಕೇ 4 ಸಾವಿರ ರೂಪಾಯಿಗಾಗಿ ಸ್ನೇಹಿತನ ಹತ್ಯೆ..! - friend murder news

ಕಲಬುರಗಿಯಲ್ಲಿ ಕೇವಲ 4 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಗೆಳೆಯನನ್ನೇ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

man murders friend for 4000 rs credit issue
ಸ್ನೇಹಿತನ ಹತ್ಯೆ
author img

By

Published : Jun 30, 2021, 3:50 PM IST

ಕಲಬುರಗಿ: ಕೇವಲ 4 ಸಾವಿರ ರೂಪಾಯಿಗಾಗಿ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳನ್ನು 24 ಗಂಟೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿ ಮೂಡೆ (26), ಅರುಣಕುಮಾರ ಅಲ್ಲಾಪುರೆ (22) ಬಂಧಿತ ಆರೋಪಿಗಳು. ಕಲಬುರಗಿ ಹೊರವಲಯದ ಸ್ವಾಮಿ ಸಮರ್ಥ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ ತಾಲೂಕಿನ ಅವರಾದ ಹಾಗೂ ಆಲಗೂಡ್ ಗ್ರಾಮದ ರಸ್ತೆಯಲ್ಲಿ ಕಲಬುರಗಿಯ ರಾಮನಗರ ನಿವಾಸಿ ಸಂತೋಷ ಹೂಗಾರ್(29) ಎಂಬಾತನ ಕೊಲೆ ನಡೆದಿತ್ತು.

ಕೊಲೆಯಾದ ಸಂತೋಷ ತನ್ನ ಸ್ನೇಹಿತ ಶಿವಾಜಿ ಎಂಬಾತನಿಗೆ 4 ಸಾವಿರ ರೂ ಹಣವನ್ನು ಸಾಲವಾಗಿ ಕೊಟ್ಟಿದ್ದನಂತೆ. ಕೆಲ ತಿಂಗಳಾದರೂ ವಾಪಸ್​ ಕೊಡದ ಹಿನ್ನೆಲೆ ಹಣ ಕೊಡುವಂತೆ ಸಂತೋಷ ಕೇಳಿದ್ದಾನೆ. ಹಣ ಕೊಡದಿದ್ದರೆ ಹುಡುಗರಿಂದ ಹೊಡೆಸುವುದಾಗಿ ಹೆದರಿಸಿದ್ದಾನಂತೆ.

ಇದರಿಂದ ಕೋಪಗೊಂಡ ಶಿವಾಜಿ, ತನ್ನ ಇನ್ನೊಬ್ಬ ಸ್ನೇಹಿತ ಅರುಣ ಕುಮಾರನೊಂದಿಗೆ ಸೇರಿ ಸಂತೋಷನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಢಾಬಾವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ.

ನಂತರ ಆಟೋದಲ್ಲಿಯೇ ಔರಾದ್​ ಮತ್ತು ಆಲಗೂಡ್ ರಸ್ತೆ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸಂತೋಷನ ಮುಖ ಹಾಗೂ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ‌. ಈ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.