ಕಲಬುರಗಿ: ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕಲಬುರಗಿಯ ಗಣೇಶ ನಗರದಲ್ಲಿ ನಡೆದಿದೆ.
ಹರಸೂರು ಗ್ರಾಮದ ನಾಗರಾಜ ಸಮಾಳ (33) ಮೃತಪಟ್ಟ ವ್ಯಕ್ತಿ.
2015ರಲ್ಲಿ ಅಂಬಿಕಾ ಎನ್ನುವವರೊಂದಿಗೆ ನಾಗರಾಜ ಮದುವೆಯಾಗಿದ್ದರು. ಆದರೆ, ಹೆಂಡತಿಯೊಂದಿಗೆ ಸಂಸಾರ ಮಾಡದೆ ಪ್ರಿಯತಮೆ ಅನಿತಾಳೊಂದಿಗೆ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನಾಗರಾಜ ಅವರನ್ನು ಅನಿತಾ ಕೊಲೆ ಮಾಡಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ ಎಂದು ನಾಗರಾಜ ಸಹೋದರ ರಾಜಶೇಖರ ಆರೋಪಿಸಿದ್ದಾರೆ.
ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.