ETV Bharat / state

ಜನ್ಮದಿನದಂದು ಕೋವಿಡ್ ಆಸ್ಪತ್ರೆಗೆ 650 ಬೆಡ್​ ನೀಡಿದ ಮಲ್ಲಿಕಾರ್ಜುನ್​ ಖರ್ಗೆ!

ಮಲ್ಲಿಕಾರ್ಜುನ್ ಖರ್ಗೆ ತಮ್ಮ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಗೆ ಕೊರೊನಾ ಸಂಕಷ್ಟದಲ್ಲಿರುವರಿಗೆ ಹಾಗೂ ಬಡವರಿಗೆ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದರು. ಅಲ್ಲದೆ ಹುಟ್ಟುಹಬ್ಬದಂದು ಕೋವಿಡ್ ಆಸ್ಪತ್ರೆಗೆ ಉಚಿತ ಬೆಡ್​ಗಳನ್ನು ಹಸ್ತಾಂತರಿಸಿದ್ದಾರೆ.

Mallikarjun Kharge who gave 650 bed to covid Hospital on birthday
ಹುಟ್ಟುಹಬ್ಬದಂದು ಕೋವಿಡ್ ಆಸ್ಪತ್ರೆಗೆ 650 ಬೆಡ್​ ನೀಡಿದ ಮಲ್ಲಿಕಾರ್ಜುನ್​ ಖರ್ಗೆ
author img

By

Published : Jul 22, 2020, 12:38 AM IST

ಕಲಬುರಗಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದು, ಜನ್ಮ ದಿನದಂದು ಕೊರೊನಾ ಸೋಂಕಿತರಿಗೆ ನೆರವಾಗಿದ್ದಾರೆ.

ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಬೇಕಾದ ಸರ್ಕಾರ ಕೈಕಟ್ಟಿ‌ಕುಳಿತಿದೆ. ಇದನ್ನು ಮನಗಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಕಲಬುರಗಿ ಘಟಕ ಜಿಲ್ಲೆಗೆ 550 ಬೆಡ್​​ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಪ್ರತಿ ವರ್ಷ ಬೆಂಗಳೂರು ನಿವಾಸದಲ್ಲಿ ಅವರ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ದೇಶದ ಜನ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವುದರಿಂದ ಖರ್ಗೆ ಅವರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದರು.

Mallikarjun Kharge who gave 650 bed to covid Hospital on birthday
ಕೋವಿಡ್​ ಆಸ್ಪತ್ರೆಗೆ ನೀಡಲಾದ ಬೆಡ್​ಗಳು

ಅಲ್ಲದೆ ತಮ್ಮ ಅಭಿಮಾನಿಗಳಿಗೆ ಕೊರೊನಾ ಸಂಕಷ್ಟದಲ್ಲಿರುವರಿಗೆ ಹಾಗೂ ಬಡವರಿಗೆ ಸಹಾಯ ಮಾಡುವಂತೆ ಕರೆ ಕೊಟ್ಟಿದ್ದರು. ಚಿತ್ತಾಪುರ ಮತ್ತು ಕಲಬುರಗಿ ನಗರಗಳಿಗೆ ಬೆಡ್​ಗಳು ಬಂದು ತಲುಪಿವೆ. ಇನ್ನು ಹುಟ್ಟುಹಬ್ಬದಂದೆ ಕೋವಿಡ್ ರೋಗಿಗಳ ಸೇವೆಗೆ ಬೆಡ್​ಗಳ ಹಸ್ತಾಂತರಿಸಲಾಗಿದೆ.

ಈ ಕುರಿತು ತಮ್ಮ ಫೇಸ್​​​​​​​ಬುಕ್​​​​ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಇದು ಚಿತ್ತಾಪುರ ಮಾಡಲ್ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ಕಿವಿಹಿಂಡಿದ್ದಾರೆ. ಸೋಂಕಿತರಿಗೆ ನೆರವಾಗಲಿ ಎಂದು ಪರಿಸರ ಸ್ನೇಹಿ ಬೆಡ್​​ಗಳನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ನೀಡಲಾಗಿದೆ.

ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ಬೆಡ್​ಗಳ ಕೊರತೆ ನಿಗಿಸಿಸುವ ಉದ್ದೇಶದಿಂದ ಕೈಲಾದಷ್ಟು ನೆರವು ನೀಡಲೆಂದು ಸದ್ಯಕ್ಕೆ 650 ಬೆಡ್​​​ಗಳ ದೇಣಿಗೆ ರೂಪದಲ್ಲಿ ನೀಡಲಾಗಿದೆ. ಕಲಬುರ್ಗಿ ಜಿಲ್ಲೆಗೆ 550 ಹಾಗೂ ರಾಯಚೂರು ಜಿಲ್ಲೆಗೆ 100 ಬೆಡ್​ಗಳನ್ನು ನೀಡಲಾಗಿದೆ.

ಚಿತ್ತಾಪುರದ ಕೋವಿಡ್ ಕೇಂದ್ರಕ್ಕೂ 100 ಬೆಡ್ ಒದಗಿಸಲಾಗಿದೆ. ಚಿತ್ತಾಪುರ ಮಾಡೆಲ್ ಅವಲೋಕಿಸಿ ರಾಜ್ಯದಲ್ಲಿ ತಲೆದೋರಿದ ಬೆಡ್ ಕೊರತೆ ನೀಗಿಸುವಂತೆ ಹಾಗೂ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ‌ನೀಡುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.