ಕಲಬುರಗಿ : ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಗಾಂಧಿ ಕುಟುಂಬದಿಂದ ಯಾರೂ ಅಧ್ಯಕ್ಷರಾಗೋಕೆ ತಯಾರಿಲ್ಲ, ಪಕ್ಷದ ಮೂಲ ತತ್ವಗಳಿಗೆ ಗಟ್ಟಿಯಾದ ಧ್ವನಿ ಬೇಕಾಗಿದೆ. ಆ ಕೆಲಸ ನಾನು ಮಾಡಿದ್ದೇನೆ ಎಂಬ ನಂಬಿಕೆ ಇಟ್ಟು ಹಿರಿಯ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಎಲ್ಲರೂ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದರು. ಹೀಗಾಗಿ ಎಲ್ಲರ ಒತ್ತಡ ಮೇರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವುದಾಗಿ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಜೆಪಿ ಬಡತನ ಸೃಷ್ಟಿ ಮಾಡುತ್ತಿದೆ : ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ದಿನೋಪಯೋಗಿ ವಸ್ತುಗಳು ಗಗನಕ್ಕೆ ಏರಿ ಕುಳಿತಿವೆ. ಬೆಲೆ ಏರಿಕೆ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ, ನಾವು ಈ ಹಿಂದೆ ಬಡತನ ನಿರ್ಮೂಲನೆಗೆ ಹೋರಾಟ ಮಾಡಿದ್ದೇವೆ. ಸಂವಿಧಾನ ರಕ್ಷಣೆ ಮಾಡೋದು ನಮ್ಮೆಲ್ಲರ ಕರ್ತವ್ಯ ಇದೆ ಎಂದು ಖರ್ಗೆ ಹೇಳಿದ್ದಾರೆ.
ಇವತ್ತು ಜನ ತಾಳ್ಮೆ ಕಳೆದುಕೊಂಡು ಆಕ್ರೋಶದಿಂದ ಸರ್ಕಾರದ ಮೇಲೆ ಮುಗಿ ಬೀಳ್ತಿದ್ದಾರೆ. ನಾವು ಉತ್ತಮ ರಸ್ತೆ ಕೊಟ್ಟಿದ್ದೇವೆ. ಇವತ್ತು ರಸ್ತೆಗಳಲ್ಲಿ ಪಾಟ್ ಹೋಲ್ಗಳು ಬಿದ್ದಿವೆ. ನಮ್ಮ ದೇಶದಲ್ಲಿ ಅನ್ನಕ್ಕಾಗಿ ಜನರು ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಯಾವ ಪಕ್ಷದಲ್ಲಿ ಯುವಕರು ಹೆಚ್ಚು ಇರಲ್ಲವೋ ಆ ಪಕ್ಷ ಬೆಳೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೆ ವೇಳೆ ಭಾರತ ಜೋಡೋ ಯಾತ್ರೆ ಕುರಿತಾಗಿ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ : ಎಐಸಿಸಿ ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !