ಕಲಬುರಗಿ: ಮೊದಲು ಖಾಸಗಿ ಸೆಂಟರ್ಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸುರಕ್ಷತೆಯ ದೃಷ್ಟಿಯಿಂದ ಯುಐಡಿಎಐ ಆದೇಶದ ಅನ್ವಯ ಖಾಸಗಿ ಕೇಂದ್ರಗಳ ಅನುಮತಿ ಹಿಂಪಡೆದು ಸರ್ಕಾರಿ ಆಧಾರ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿ ಕಾರ್ಯ ನಡೆದಿದೆ. ಇದರಿಂದ ಆಧಾರ್ ಕಾರ್ಡ್ ಮಾಡಿಸುವ ಸೆಂಟರ್ನಲ್ಲಿ ಜನದಟ್ಟಣೆ ಹೆಚ್ಚಾಗುವಂತೆ ಮಾಡಿದೆ.
ಬಸ್ಪಾಸ್ ಸೇರಿದಂತೆ ಯಾವುದೊಂದು ಯೋಜನೆಯ ಲಾಭ ಪಡೆಯಬೇಕಾದರೆ ಆಧಾರ ಕಾರ್ಡ್, ಗುರುತಿನ ಚೀಟಿ ಕಡ್ಡಾಯವಾಗಿದೆ. ಹಾಗಾಗಿ ಆಧಾರ್ ಕೇಂದ್ರಗಳಲ್ಲಿ ಸರಿಪಡಿಸುವವರು, ಹೊಸದಾಗಿ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಮುಂಚೆ ಖಾಸಗಿ ಸೆಂಟರ್ಗಳಲ್ಲಿ ಆಧಾರ್ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ, ಸುರಕ್ಷತೆಯ ಹಿನ್ನೆಲೆಯಲ್ಲಿ ಖಾಸಗಿ ಕೇಂದ್ರಗಳಿಗೆ ಕೊಟ್ಟಿದ್ದ ಅನುಮತಿ ಹಿಂಪಡೆದು, ಸರ್ಕಾರಿ ಆಧಾರ ಕೇಂದ್ರಗಳಲ್ಲಿ ಮಾತ್ರ ತಿದ್ದುಪಡಿ ಅಥವಾ ಹೊಸ ಕಾರ್ಡ್ ಮಾಡುವ ಕಾರ್ಯ ನಡೆದಿದೆ. ಇದರಿಂದ ಸೆಂಟರ್ಗಳಿಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಾಗಿದೆ.
ಸದ್ಯ ನಗರದಲ್ಲಿ ಮೂರು ಕಡೆಗಳಲ್ಲಿ ಆಧಾರ್ ಕೇಂದ್ರ ತೆರೆಯಲಾಗಿದೆ. ಮಿನಿ ವಿಧಾನ ಸೌಧ, ಸೂಪರ್ ಮಾರ್ಕೇಟ್ ಗುಲಬರ್ಗ ಒನ್ ಕೇಂದ್ರ ಹಾಗೂ ಖರ್ಗೆ ಬಂಕ್ ಕೆಎಚ್‌ಬಿ ಕಾಂಪ್ಲೇಕ್ಸ್ನಲ್ಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ತಿದ್ದುಪಡಿ, ಹೊಸ ಕಾರ್ಡ್ ಮಾಡುವುದು ಸೇರಿ ಪ್ರತಿ ಕೇಂದ್ರದಲ್ಲಿ ತಲಾ 30 ರಂತೆ ನಿತ್ಯ 90 ರಿಂದ 100 ಜನರ ಆಧಾರ್ ಸಂಬಂಧಿತ ಕೆಲಸ ಮಾಡಿ ಕೊಡಲಾಗುತ್ತಿದೆ.
ಓದಿ: ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!
ಬಹುತೇಕ ವಿಳಾಸ ಬದಲಾವಣೆ, ಜನ್ಮ ದಿನಾಂಕ ಬದಲಾವಣೆ, ಮೊಬೈಲ್ ನಂಬರ್ ಬದಲಾವಣೆ ಕುರಿತ ಸಮಸ್ಯೆಗಳ ನಿವಾರಣೆ ಜನರು ಆಧಾರ್ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ನಿತ್ಯ ಬೆಳಗ್ಗೆ ಏಳು ಗಂಟೆಗೆ 30 ಜನರಿಗೆ ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಒಂದು ಚಿಕ್ಕ ತಿದ್ದುಪಡಿ ಇದ್ದರೂ ಕೆಲಸ ಕಾರ್ಯ ಬಿಟ್ಟು ಆಧಾರ್ ಕೇಂದ್ರ ಕಾಯುವುದು ಅನಿವಾರ್ಯವಾಗಿದೆ ಎಂದು ಜನರು ಅಸಮಾಧಾನ ಹೊರ ಹಾಕಿದ್ದಾರೆ.