ETV Bharat / state

ಕಲಬುರಗಿ: ಜಿಮ್ಸ್ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್​ ಭೇಟಿ, ಪರಿಶೀಲನೆ - ಜಲ ಶಾಸ್ತ್ರಜ್ಞ ಡಾ ಅಂಬಾರಾಯ ರುದ್ರವಾಡಿ

ಲೋಕಾಯುಕ್ತ ಎಸ್ ಪಿ ಎ ಆರ್ ಕರ್ನೂಲ್ ಅವರು ಇಂದು (ಗುರುವಾರ) ಜಿಮ್ಸ್​ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಮ್ಸ್ ಆಸ್ಪತ್ರೆಗೆ ದಿಢೀರ್​ ಭೇಟಿ ನೀಡಿದ ಲೋಕಾಯುಕ್ತ ಎಸ್.ಪಿ.ಎ.ಆರ್ ಕರ್ನೂಲ್

author img

By

Published : Dec 8, 2022, 10:23 PM IST

ಕಲಬುರಗಿ: ಜಿಮ್ಸ್ ಆಸ್ಪತ್ರೆಗೆ ಇಂದು ಸಂಜೆ ದಿಢೀರ್​ ಭೇಟಿ ನೀಡಿದ ಕಲಬುರಗಿ ಲೋಕಾಯುಕ್ತ ಎಸ್​ಪಿಎಆರ್ ಕರ್ನೂಲ್, ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿದರು. ಒಪಿಡಿ ಕೌಂಟರ್​ನಲ್ಲಿ ಹೆಚ್ಚಿನ ರೋಗಿಗಳು ನಿಂತಿರುವುದನ್ನು ಕಂಡ ಅವರು, ಕೌಂಟರ್ ಹೆಚ್ಚಳ ಮಾಡುವಂತೆ ಮತ್ತು ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ‌ ಪ್ರತ್ಯೇಕ ಕೌಂಟರ್ ತೆರೆಯುವಂತೆ ಸ್ಥಳದಲ್ಲಿದ್ದ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಅವರಿಗೆ ನಿರ್ದೇಶನ ನೀಡಿದರು.

ಆಸ್ಪತ್ರೆಯಲ್ಲಿ ರೋಗಿಗಳು ಎಲ್ಲಿ ಬೇಕಾದಲ್ಲಿ‌ ನಿಂತಿದ್ದನ್ನು ಗಮನಿಸಿ ಅವರಿಗೆ ಕುಳಿತುಕೊಳ್ಳಲು ಅಲ್ಲಲ್ಲಿ ಆಸನದ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು. ಆಸ್ಪತ್ರೆಯ ಒಳರೋಗಿ ವಿಭಾಗ, ಅಡುಗೆ ಕೋಣೆ, ಹೆರಿಗೆ ವಿಭಾಗಕ್ಕೆ ಭೇಟಿ ನೀಡಿ, ರೋಗಿಗಳಿಗೆ ಆಸ್ಪತ್ರೆಯಲ್ಲಿ‌ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಊಟೋಪಚಾರದ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದರು.

ಶುಚಿತ್ವ ಕಾಪಾಡಿಕೊಳ್ಳಬೇಕು: ಇಲ್ಲಿ ಚಿಕಿತ್ಸೆಗಾಗಿ ಬಡ ಜನರೇ ಹೆಚ್ಚು ಬರುತ್ತಾರೆ. ಮಾನವೀಯತೆಯಿಂದ ಅವರನ್ನು ಕಂಡು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಔಷಧಿ ಕೊರತೆಯಾಗದಂತೆ ಮತ್ತು ಯಾವುದೇ ದೂರಿಗೆ ಅವಕಾಶ ನೀಡಬಾರದು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಜಲ ಶಾಸ್ತ್ರಜ್ಞ ಡಾ.ಅಂಬಾರಾಯ ರುದ್ರವಾಡಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ಹೆಚ್, ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಇಬ್ರಾಹಿಂ ಸೇರಿದಂತೆ ಇನ್ನಿತರ ವೈದ್ಯರು, ಸಿಬ್ಬಂದಿ ಇದ್ದರು.

ಇದನ್ನೂ ಓದಿ: ಗದಗ: ಔಷಧ ಉಗ್ರಾಣಕ್ಕೆ ನುಗ್ಗಿದ ಮಳೆ ನೀರು.. ಅಂದಾಜು 4 ಕೋಟಿ ಮೌಲ್ಯದ ಔಷಧಗಳು ಜಲಾವೃತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.