ETV Bharat / state

ಇಟ್ಟಲ್ಲೇ ಇರಿಸಿದ್ದಕ್ಕೆ ಹಾಳಾಗ್ಹೋದವು ಖಡಕ್‌ ರೊಟ್ಟಿಗಳು.. ಹಿಂಗಾದ್ರಾ, ನಮ್‌ ಬಾಳ್ವೆ ಹೆಂಗ್‌ ಅಂತೀನಿ.. - ಕೊರೊನಾ ವೈರಸ್ ನ್ಯೂಸ್

ಏಪ್ರಿಲ್, ಮೇ ತಿಂಗಳು ಮದುವೆ ಸೀಸನ್, ಖಡಕ್ ರೊಟ್ಟಿಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಹೀಗಾಗಿ ಅಪಾರ ಪ್ರಮಾಣದ ಖಡಕ್ ರೊಟ್ಟಿಯನ್ನು ಮುಂಚೆಯೇ ತಯಾರು ಮಾಡಿ ಇಡಲಾಗಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಆಡಂಬರದ ಮದುವೆಗಳು ನಿಂತು ಹೋಗಿ, ಮಾಡಿಟ್ಟಿರುವ ರೊಟ್ಟಿಗಳು ಇಟ್ಟಲ್ಲಿಯೇ ಪುಡಿಯಾಗಿ ಹಾಳಾಗುತ್ತಿವೆ.

Lockdown effect on Khadak Rotti
ಖಡಕ್​ ರೊಟ್ಟಿಗೂ ತಟ್ಟಿದ ಕೊರೊನಾ ಭೀತಿ
author img

By

Published : May 10, 2020, 11:42 AM IST

ಕಲಬುರಗಿ : ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಖಡಕ್ ರೊಟ್ಟಿ ಫುಲ್ ಫೇಮಸ್.. ಮದುವೆ, ಸಭೆ, ಸಮಾರಂಭದಲ್ಲಿ ಖಡಕ್ ರೊಟ್ಟಿ ಇರಲೇಬೇಕು. ಹೀಗಾಗಿ ರೊಟ್ಟಿ ವ್ಯಾಪಾರವನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಲಾಕ್​ಡೌನ್​ನಿಂದಾಗಿ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ.

ಖಡಕ್​ ರೊಟ್ಟಿಗೂ ತಟ್ಟಿದ ಕೊರೊನಾ ಭೀತಿ..

ಖಡಕ್ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ ರಾಜ್ಯ ಮಾತ್ರವಲ್ಲ ದೇಶದಲ್ಲೆಡೆ ಹೆಸರುವಾಸಿ. ಏಪ್ರಿಲ್, ಮೇ ತಿಂಗಳು ಮದುವೆ ಸೀಸನ್, ಖಡಕ್ ರೊಟ್ಟಿಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಹೀಗಾಗಿ ಅಪಾರ ಪ್ರಮಾಣದ ಖಡಕ್ ರೊಟ್ಟಿಯನ್ನು ಮುಂಚೆಯೇ ತಯಾರು ಮಾಡಿ ಇಡಲಾಗಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಆಡಂಬರದ ಮದುವೆಗಳು ನಿಂತು ಹೋಗಿ, ಮಾಡಿಟ್ಟಿರುವ ರೊಟ್ಟಿಗಳು ಇಟ್ಟಲ್ಲಿಯೇ ಪುಡಿಯಾಗಿ ಹಾಳಾಗುತ್ತಿವೆ.

ಖಡಕ್ ರೊಟ್ಟಿ ವ್ಯಾಪಾರ ನೆಚ್ಚಿಕೊಂಡು ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು 400ಕ್ಕೂ ಅಧಿಕ ಕುಟುಂಬ ಜೀವನ ಸಾಗಿಸುತ್ತಿವೆ. ಲಾಕ್‌ಡೌನ್ ಇವರೆಲ್ಲರನ್ನೂ ಸಂಕಷ್ಟದ ಸುಳಿಗೆ ಸಿಲುಕಿಸಿದೆ. ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮಂಜುನಾಥ ರೊಟ್ಟಿ ಕೇಂದ್ರ ನಡೆಸುವ ಜಗದೇವಿ ಅವರ ಬಳಿಯೇ ಸುಮಾರು 50 ಸಾವಿರಕ್ಕೂ ಹೆಚ್ಚು ಖಡಕ್ ರೊಟ್ಟಿಗಳು ಹಾಳಾಗಿವೆ. ರೊಟ್ಟಿಯನ್ನೇ ನೆಚ್ಚಿಕೊಂಡಿದ್ದ ಕುಟುಂಬಗಳು ಕಂಗಾಲಾಗಿವೆ. ಸರ್ಕಾರ ಈಗಾಗಲೇ ಹಲವು ಶ್ರಮಿಕ ವರ್ಗಕ್ಕೆ ಆರ್ಥಿಕ ಸಹಾಯ ಮಾಡಿದಂತೆ ತಮ್ಮ ನೆರವಿಗೂ ಬರಲಿ ಎಂಬುದು ರೊಟ್ಟಿ ಕೇಂದ್ರದವರ ಮನವಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.