ETV Bharat / state

ಮಳೆ ನೀರಿನಲ್ಲಿ ಬೈಕ್​​​ ಸಮೇತ ಕೊಚ್ಚಿ ಹೋದ ವ್ಯಕ್ತಿ.. ಸ್ಥಳೀಯರಿಂದ ರಕ್ಷಣೆ

ಮಳೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಇಂದು ಕೂಡ ವರುಣನ ಅಬ್ಬರ ಮುಂದುವರಿದಿದೆ.

Locals rescued a Man  who drowned in rain water in Kalburgi
ಮಳೆ ನೀರಿನಲ್ಲಿ ಬೈಕ್​​​ ಸಮೇತ ಕೊಚ್ಚಿ ಹೋದ ವ್ಯಕ್ತಿ...ಸ್ಥಳಿಯರಿಂದ ರಕ್ಷಣೆ
author img

By

Published : Jul 25, 2020, 12:16 AM IST

ಕಲಬುರಗಿ: ಮಳೆ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಇಂದು ಕೂಡ ವರುಣನ ಅಬ್ಬರ ಮುಂದುವರಿದಿದೆ.

ಧಾರಾಕಾರ ಮಳೆಗೆ ಆಳಂದ ತಾಲೂಕಿನಲ್ಲಿ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ನಿಂಬಾಳ-ಯಳಸಂಗಿ ಮಾರ್ಗ ಮಧ್ಯದ ಹಳ್ಳ ಕೂಡ ತುಂಬಿ ಹರಿಯುತ್ತಿದ್ದು, ಹಳ್ಳದ ಸೇತುವೆ ದಾಟುವಾಗ ಕೊಡ ಮಾರುವ ವ್ಯಕ್ತಿ ಬೈಕ್, ಕೊಡಗಳ ಸಮೇತ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಮಳೆ ನೀರಿನಲ್ಲಿ ಬೈಕ್​​​ ಸಮೇತ ಕೊಚ್ಚಿ ಹೋದ ವ್ಯಕ್ತಿ...ಸ್ಥಳಿಯರಿಂದ ರಕ್ಷಣೆ

ಈಜು ಬಲ್ಲವನಾಗಿದ್ದರಿಂದ ಸುಮಾರು 500 ಮೀಟರ್ ದೂರದವರೆಗೂ ಈಜಿ ನದಿ ದಂಡೆಯ ಬಳಿ ಇದ್ದ ಬೇಲಿಯ ಸಹಾಯದಿಂದ ಹಳ್ಳದಲ್ಲಿ ಸಿಲುಕಿಕೊಂಡಿದ್ದ. ಬಳಿಕ ಸ್ಥಳದಲ್ಲಿಯೇ ಇದ್ದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದು, ಬೈಕ್ ಮತ್ತು ಕೊಡಗಳು ನೀರು ಪಾಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.