ಕಲಬುರಗಿ: ದೇಶದೆಲ್ಲೆಡೆ ಮದ್ಯ ಪ್ರಿಯರು ಎಣ್ಣೆ ಹೊಡೆದು ಹೊಸ ವರ್ಷವನ್ನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಆದ್ರೆ ಬಿಸಿಲೂರು ಕಲಬುರಗಿ ಜಿಲ್ಲೆಯವರಿಗೆ ಮಾತ್ರ ಅತಿವೃಷ್ಟಿ, ಅನಾವೃಷ್ಟಿಯ ಎಫೆಕ್ಟ್ ತಟ್ಟಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ 27 ಲಕ್ಷ ರೂ. ಮೌಲ್ಯದ ಮಾರಾಟ ಕಡಿಮೆಯಾಗಿದೆ. ಕಳೆದ 2018ರ ಡಿಸೆಂಬರ್ 31ರ ಹೊಸ ವರ್ಷ ಆಚರಣೆಯಂದು 2.89 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಆದ್ರೆ ಈ ವರ್ಷ 2019 ಡಿಸೆಂಬರ್ 31 ರಂದು ಲಿಕ್ಕರ್, ಬಿಯರ್ ಸೇರಿ 2.68 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಈ ವರ್ಷದ ಅಬಕಾರಿ ಇಲಾಖೆ ಮಾಹಿತಿ ಪ್ರಕಾರ, ಸರಾಸರಿ 27 ಲಕ್ಷ ಮದ್ಯ ಮಾರಾಟ ಕುಸಿತವಾಗಿದೆ. ಇದರ ಕುಸಿತಕ್ಕೆ ಬರಗಾಲ, ಅತಿವೃಷ್ಠಿ, ಪ್ರವಾಹ ಹಾಗೂ ಆರ್ಥಿಕ ಕುಸಿತ ಕಾರಣ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.