ETV Bharat / state

ನನಗೆ ಮೋಸ ಮಾಡಿದಿಯಾ... ವಾಟ್ಸಾಪ್ ಸ್ಟೇಟಸ್​​ ಹಾಕಿ ಮಗಳೊಂದಿಗೆ ನದಿಗೆ ಜಿಗಿದ ಶಿಕ್ಷಕಿ - teacher shanthakumari commits suicide

ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಕುಮಾರಿಯನ್ನು ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಗಂಡ ಹೆಂಡತಿಯ ಮಧ್ಯೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ..

Shanthakumari
ಶಾಂತಕುಮಾರಿ
author img

By

Published : Oct 24, 2021, 9:00 PM IST

ಕಲಬುರಗಿ: ಮಗು ಜೊತೆ ನದಿಗೆ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಹಬಾದ್ ಹೊರವಲಯದ ಕಾಗಿಣಾ ನದಿಯಲ್ಲಿ ನಡೆದಿದೆ.

ಶಹಬಾದ್ ಪಟ್ಟಣದ ನಿವಾಸಿ ಶಾಂತಕುಮಾರಿ (32) ಹಾಗೂ ಆರು ತಿಂಗಳ ಆಕೆಯ ಮಗು ಗಂಗಾ ಆತ್ಮಹತ್ಯೆ ಮಾಡಿಕೊಂಡವರು. ನೀನು ನನಗೆ ಚೀಟ್ ಮಾಡಿದ್ದೀಯ. ನನ್ನ, ನನ್ನ ಮಗಳ ಲೈಫ್ ಹಾಳು ಮಾಡಿದ್ದಿಯ ಎಂದು ಗಂಡ ಸಿದ್ದಲಿಂಗ ಎಂಬುವವರ ಹೆಸರನ್ನು ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ.

ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿರುವ ಶಾಂತಕುಮಾರಿಯನ್ನು ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದ ಸಿದ್ದಲಿಂಗ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಗಂಡ, ಹೆಂಡತಿಯ ಮಧ್ಯೆ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ಶಾಂತಕುಮಾರಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಶಹಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎನ್​ಡಿಆರ್​ಎಫ್​ ತಂಡ, ಅಗ್ನಿ ಶಾಮಕ‌ ದಳ, ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಈಗಾಗಲೇ ತಾಯಿ ಮೃತ ದೇಹ ಪತ್ತೆ ಮಾಡಿದ್ದಾರೆ. ಮಗುವಿನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಓದಿ: ನಿಗಮ ಮಂಡಳಿ ಜೇನುಗೂಡಿಗೆ ಕೈಹಾಕಲು ಮುಂದಾದ ಸಿಎಂ: ಉಪ ಸಮರದ ನಂತರ ಮೇಜರ್ ಸರ್ಜರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.