ಕಲಬುರಗಿ: 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಲಬುರಗಿಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.
ಅಭಿವೃದ್ಧಿ ವಿಷಯದ ಬಗ್ಗೆ ಪ್ರಧಾನಿ ಬಹಿರಂಗ ಚರ್ಚೆಗೆ ಬಂದ್ರೆ ನಾವು ಉತ್ತರ ಕೊಡುತ್ತೇವೆ. ಈ ಹಿಂದೆ ಲೋಕಸಭೆಯಲ್ಲಿ ನಾನು ಕೇಳಿದ್ದ ಪ್ರಶ್ನೆಗೆ ಮೋದಿ ಒಂದಕ್ಕೂ ಉತ್ತರ ನೀಡಿಲ್ಲ. ಬಹಿರಂಗ ಚರ್ಚೆಗೆ ಅವರು ಬರಲಿ, ನಾವು ಬರುತ್ತೇವೆ. ಕಾಂಗ್ರೆಸ್ ಏನು ಮಾಡದೆ ಇದ್ದಿದ್ದರೆ ಇವತ್ತು ಮೋದಿಗೆ ಸಂಸತ್ತಿನಲ್ಲಿ ನಿಂತು ಮಾತನಾಡುವ ಶಕ್ತಿ ಬರುತ್ತಿರಲಿಲ್ಲ ಎಂದು ಖರ್ಗೆ ಕಿಡಿಕಾರಿದ್ದಾರೆ.
70 ವರ್ಷ ಕಾಂಗ್ರೆಸ್ ನವರೇ ದೇಶವನ್ನಾಳಿದ್ದಾರೆ. ಆದ್ರೆ ಅಭಿವೃದ್ಧಿ ಮಾಡಿಲ್ಲ ಎಂದು ಹೇಳುವ ಪ್ರಧಾನಿ, ತಮ್ಮ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಬೇರೆ ಪಕ್ಷದ ಹಲವರು ಈ ಹಿಂದೆ ಪ್ರಧಾನಿ ಆದ ವೇಳೆ ಅಭಿವೃದ್ಧಿ ಕೆಲಸ ಮಾಡಲಿಲ್ಲವೇ ಎಂದು ಮೋದಿಗೆ ಖರ್ಗೆ ಪ್ರಶ್ನಿಸಿದ್ದಾರೆ.