ಕಲಬುರಗಿ: ಸಿಐಡಿ ಕಸ್ಟಡಿಯ ಅವಧಿ ಮುಗಿದ ಹಿನ್ನಲೆ, ಆರೋಪಿ ಆರ್.ಡಿ. ಪಾಟೀಲ್ನನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ ಜಿಲ್ಲಾ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕೆಇಎ ನೇಮಕಾತಿ ಅಕ್ರಮ ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ಇದರ ಹಿನ್ನಲೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಆರೋಪಿ ಆರ್ಡಿಪಾಟೀಲ್ನ ನ್ಯಾಯಾಂಗ್ ಬಂಧನದ ಮೂಲಕ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದರು.
ಇದೀಗ ಅವಧಿ ಪೂರ್ಣಗೊಂಡ ಹಿನ್ನಲೆ ಗುರುವಾರ ನ್ಯಾಯಾಲಯದ ಮುಂದೆ ಆರ್.ಡಿ. ಪಾಟೀಲ್ನನ್ನು ಸಿಐಡಿ ಅಧಿಕಾರಿಗಳು ಹಾಜರು ಪಡಿಸಿದ್ದರು. ನ್ಯಾಯಾಧೀಶರಾದ ಸಂತೋಷ ಶ್ರೀವಾಸ್ತವ ಅವರು ಆರೋಪಿಯನ್ನು ಮತ್ತೆ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಕ್ಟೋಬರ್ 28 ರಂದು ನಡೆದ ಕೆಇಎ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬ್ಲೂಟೂತ್ ಮೂಲಕ ಅಕ್ರಮ ಎಸಗಿದ ಆರೋಪ ಆರ್.ಡಿ. ಪಾಟೀಲ್ ಮೇಲಿದೆ. ಆರಂಭದಲ್ಲಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ನಂತರ, ಸರ್ಕಾರವು ಸಿಐಡಿ ತನಿಖೆಗೆ ವಹಿಸಿದ ಹಿನ್ನಲೆ ಆರೋಪಿ ಆರ್.ಡಿ. ಪಾಟೀಲ್ನನ್ನು ವಶಕ್ಕೆ ಪಡೆದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
ಕಲಬುರಗಿಯ ಅಶೋಕ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಸಿಐಡಿ ಅಧಿಕಾರಿಗಳು ಮಾಡಿದ್ದಾರೆ. ಜೊತೆಗೆ ವಿಶ್ವ ವಿದ್ಯಾಲಯ ಠಾಣೆಯಲ್ಲಿ ದಾಖಲಾದ ಪ್ರಕರಣ ಕುರಿತಾಗಿ ವಿಚಾರಣೆ ನಡೆಸಲು ಆರೋಪಿ ಆರ್.ಡಿ. ಪಾಟೀಲ್ನನ್ನು ಪುನಃ ತಮ್ಮಗೆ ನೀಡಲು ಸಿಐಡಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರಸ್ತುತ ಕೋರ್ಟ್ ಸಿಐಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದೆ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಪ್ರಕರಣ ಸಿಬಿಐನಿಂದ ವಾಪಸ್ ಪಡೆದಿರುವುದು ಖಂಡನೀಯ: ಕೆ.ಎಸ್.ಈಶ್ವರಪ್ಪ