ETV Bharat / state

ಕಲಬುರಗಿ: ಸಾಲಬಾಧೆ ತಾಳಲಾರದ ಬಾವಿಗೆ ಬಿದ್ದು ರೈತ ಆತ್ಮಹತ್ಯೆ

author img

By

Published : Feb 17, 2021, 9:04 PM IST

ಬಳವಡಗಿ ಗ್ರಾಮದ ನಿವಾಸಿ ಸಿದ್ದಲಿಂಗ ದೊಡ್ಡಮನಿ (23) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ 2 ಎಕರೆ ಜಮೀನು ಜೊತೆಗೆ ಐದು ಎಕರೆ ಜಮೀನು ಕಡತಕ್ಕೆ ಹಾಕಿಕೊಂಡು ಕೃಷಿಯಲ್ಲಿ ತೊಡಗಿದ್ದ ರೈತ ಸಿದ್ಧಲಿಂಗ, ವಾಡಿ ಎಸ್‌ಬಿಐ ಬ್ಯಾಂಕ್‌ನಲ್ಲಿ 80,000 ರೂ. ಬೆಳೆ ಸಾಲ ಪಡೆದಿದ್ದ. ಅಲ್ಲದೆ ಈ ವರ್ಷ ಎರಡೂ ಹೊಲಗಳಲ್ಲಿ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ್ದ.

Kalubaragi farmer commit suicide
ಕಲಬುರಗಿ: ಸಾಲಬಾಧೆ ತಾಳಲಾರದ ರೈತನೋರ್ವ ಬಾವಿಗೆ ಬಿದ್ದು ಆತ್ಮಹತ್ಯೆ

ಕಲಬುರಗಿ: ಸಾಲಬಾಧೆ ತಾಳಲಾರದೆ ರೈತನೋರ್ವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಡಿ ಪಟ್ಟಣದ ನಾಲವಾರ ಗ್ರಾಮದಲ್ಲಿ ನಡೆದಿದ್ದು, ಮೂರು ದಿನಗಳ ನಂತರ ಶವ ಪತ್ತೆಯಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಓದಿ: ಡಿಕೆಶಿ ಪುತ್ರಿಯ ರಿಸೆಪ್ಷನ್‌ನಲ್ಲಿ ಭಾಗಿಯಾಗಲು ಬೆಂಗಳೂರಿಗೆ ರಾಹುಲ್ ಆಗಮನ!

ಬಳವಡಗಿ ಗ್ರಾಮದ ನಿವಾಸಿ ಸಿದ್ದಲಿಂಗ ದೊಡ್ಡಮನಿ (23) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ 2 ಎಕರೆ ಜಮೀನು ಜೊತೆಗೆ ಐದು ಎಕರೆ ಜಮೀನು ಕಡತಕ್ಕೆ ಹಾಕಿಕೊಂಡು ಕೃಷಿಯಲ್ಲಿ ತೊಡಗಿದ್ದ ರೈತ ಸಿದ್ಧಲಿಂಗ, ವಾಡಿ ಎಸ್‌ಬಿಐ ಬ್ಯಾಂಕ್‌ನಲ್ಲಿ 80,000 ರೂ. ಬೆಳೆ ಸಾಲ ಪಡೆದಿದ್ದ. ಅಲ್ಲದೆ ಈ ವರ್ಷ ಎರಡೂ ಹೊಲಗಳಲ್ಲಿ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ್ದ. ಫಸಲು ಕೈಗೆಟುಕದ ಕಾರಣ ಸಂಪೂರ್ಣ ಬೆಳೆ ನಾಶವಾಗಿದೆ.

ಬ್ಯಾಂಕಿನ ಬೆಳೆ ಸಾಲ ಮತ್ತು ಔಷಧಕ್ಕಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಗೀಡಾಗಿದ್ದ ಎನ್ನಲಾಗಿದೆ. ನಾಲವಾರ ಕೋರಿಸಿದ್ದೇಶ್ವರ ಜಾತ್ರೆಗೆಂದು ಗೆಳೆಯರ ಜತೆಗೆ ಹೋದಾತ ಮನೆಗೆ ಬಂದಿರಲಿಲ್ಲ. ಫೆ. 17ರಂದು ನಾಲವಾರ ಮಠದ ಹಿಂದಿನ ಪುರಾತನ ಬಾವಿಯಲ್ಲಿ ಶವ ತೇಲಾಡಿದ್ದನ್ನು ಸ್ಥಳೀಯರು ಕಂಡಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪಿಎಸ್‌ಐ ವಿಜಯಕುಮಾರ ಭಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.