ಕಲಬುರಗಿ : ನೆರೆ ರಾಜ್ಯಗಳಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕಲಬುರಗಿಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದ ಜನರ ವಾಹನಗಳನ್ನು ಸೀಜ್ ಮಾಡುವ ಮೂಲಕ ಡಿಸಿಪಿ ಬಿಸಿ ಮುಟ್ಟಿಸಿದರು.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಡಿಸಿಪಿ ಅಡ್ಡೂರು ಶ್ರೀನಿವಾಸಲು ಸಿಟಿ ರೌಂಡ್ಸ್ ನಡೆಸಿ, ಹಲವಡೆ ರಸ್ತೆಗಿಳಿದ ವಾಹನಗಳನ್ನು ಪರಿಶೀಲಿಸಿದರು. ಸುಖಾಸುಮ್ಮನೆ ಓಡಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸ್ ಪರೇಡ್ ಮೈದಾನಕ್ಕೆ ಕಳುಹಿಸಿದರು.
ನಗರದ ಸರ್ಧಾರ ವಲ್ಲಬ್ ಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ಸೂಪರ್ ಮಾರ್ಕೆಟ್, ಕಿರಾಣಾ ಬಜಾರ ಸೇರಿದಂತೆ ವಿವಿಧೆಡೆ ಸಿಟಿ ರೌಂಡ್ಸ್ ನಡೆಸಿ, ಅನಾವಶ್ಯಕ ತಿರುಗಾಡುತ್ತಿದ್ದವರಿಗೆ ಶಾಕ್ ಕೊಟ್ಟರು.
ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್ನಲ್ಲಿ ವೀಕೆಂಡ್ ಕರ್ಫ್ಯೂಗೆ ಕ್ಯಾರೆ ಅನ್ನದ ಹಲವಾರು ಅಂಗಡಿ- ಮುಂಗಟ್ಟುಗಳ ಮಾಲೀಕರುಗಳಿಗೆ ಬ್ರಹ್ಮಪುರ ಪಿಐ ಬಿಸಿ ಮುಟ್ಟಿಸಿದರು.