ಕಲಬುರಗಿ :ಭಕ್ತರ ಆರಾಧ್ಯದೈವಕಲಬುರಗಿಶರಣಬಸವೇಶ್ವರರ 197ನೇ ಜಾತ್ರಾ ಮಹೋತ್ಸವದ ನಿಮಿತ್ತ ಈಗಾಗಲೇ ಭರದ ಸಿದ್ದತೆ ನಡೆದಿದೆ. ಬೇರೆ ರಾಜ್ಯದಿಂದ ಸ್ವಯಂ ಪ್ರೇರಿತರಾಗಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪೂಜ್ಯ ಶೀ ಶರಣಬಸವೇಶ್ವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರಗಲಿದೆ. ಕಳೆದೊಂದು ವಾರದಿಂದಜಾತ್ರೆಗೆ ಪೂರ್ವ ಸಿದ್ದತೆನಡೆಯುತ್ತಿದೆ. ಶರಣಬಸವೇಶ್ವರರ ದಾಸೋಹ ಮನೆಯಲ್ಲಿ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಅನ್ನ ದಾಸೋಹದ ತಯಾರಿ ನಡೆದಿದೆ.
ಸ್ಥಳೀಯ ಹಾಗೂ ಬೇರೆ ರಾಜ್ಯದಿಂದ ಮಹಿಳೆಯರು ಸ್ವಯಂ ಪ್ರೇರಿತವಾಗಿ ಆಗಮಿಸಿ ಗೋಧಿ,ಜೋಳ ಕುಟ್ಟಿ ದಾಸೋಹಕ್ಕೆ ಬೇಕಾಗುವ ಪದಾರ್ಥಗಳನ್ನು ಸಿದ್ಧಗೊಳಿಸುತ್ತಿದ್ದಾರೆ.
ವರ್ಷವಿಡೀದಾಸೋಹ :
ಶರಣಬಸವೇಶ್ವರ ದೇವಸ್ಥಾನದಲ್ಲಿ ವರ್ಷದ 365 ದಿನವೂ ದಾಸೋಹ ನಡೆಯುತ್ತದೆ. ಬೇರೆ ರಾಜ್ಯದಿಂದ ಆಗಮಿಸುವ ಭಕ್ತರು ದೇವರ ಪ್ರಸಾದ ಸೇವಿಸಿ ಧನ್ಯರಾಗುತ್ತಾರೆ. ಜಾತ್ರೆ ನಿಮಿತ್ತ 15 ದಿನ ವಿಶೇಷ ಪ್ರಸಾದ ನೀಡಲಾಗುತ್ತದೆ.