ETV Bharat / state

ಕಲಬುರಗಿ: ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವೈಭವ

ಕಲಬುರಗಿಯಲ್ಲಿ 200ನೇ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ವೈಭವದಿಂದ ಜರುಗಿತು. ರಥ ಬೀದಿಯಲ್ಲಿ ಮಹಾ ರಥೋತ್ಸವ ಸಾಗುತ್ತಿದ್ದಂತೆ ಭಕ್ತ ಸಮೂಹ ಖಾರಿಕು, ಬಾಳೆ ಹಣ್ಣು ಎಸೆದು ಶರಣ ಭಕ್ತಿ ಮೆರೆದರು.

sharanabasaveshwara 200th festival
ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ
author img

By

Published : Mar 22, 2022, 9:28 PM IST

ಕಲಬುರಗಿ: ಬಿಸಿಲೂರು, ಶರಣರ ನಾಡು ಕಲಬುರಗಿಯಲ್ಲಿ ಶರಣಬಸವೇಶ್ವರರ ಭಕ್ತಿ ಭಾವ ಮೇಳೈಸಿದೆ. ಮಹಾದಾಸೋಹಿ ಶರಣಬಸವೇಶ್ವರರ ೨೦೦ನೇ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ವೈಭವದಿಂದ ಜರುಗಿತು. ಅಸಂಖ್ಯಾತ ಶರಣರ ಭಕ್ತರು ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು.

ಶರಣಬಸವೇಶ್ವರರ ಸಂಸ್ಥಾನದ ಪಿಠಾಧಿಪತಿ ಚಿ. ದೊಡ್ಡಪ್ಪ ಅಪ್ಪಾ ಪರಶು ಬಟ್ಟಲು ಭಕ್ತರಿಗೆ ತೋರಿಸುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಬೀದಿಯಲ್ಲಿ ಮಹಾ ರಥೋತ್ಸವ ಸಾಗುತ್ತಿದ್ದಂತೆ ಭಕ್ತ ಸಮೂಹ ಖಾರಿಕು, ಬಾಳೆ ಹಣ್ಣು ಎಸೆದು ಶರಣ ಭಕ್ತಿ ಮೆರೆದರು. ತೇರು ಎಳೆಯುತ್ತಿದ್ದಂತೆ ಭಕ್ತರ ಬಾಯಲ್ಲಿ ಭಕ್ತಿಯಿಂದ ಶರಣಬಸವೇಶ್ವರರ ನಾಮಘೋಷ ಮೊಳಗಿತು.

ಹೆಲಿಕಾಪ್ಟರ್ ಮೂಲಕ ತೇರಿಗೆ ಹೂ ಮಳೆ ಸುರಿಸಲಾಯಿತು. ಕೊರೊನಾದಿಂದಾಗಿ ಎರಡು ಜಾತ್ರಾ ಮಹೋತ್ಸವ ಸಾಂಪ್ರದಾಯಿಕವಾಗಿ ಸರಳವಾಗಿ ಜರುಗಿತ್ತು. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಜಾತ್ರೆಗೆ ಹರಿದು ಬಂದಿದ್ದರು. ಎಲ್ಲೆಡೆಯಿಂದ ಹರಿದು ಬಂದ ಭಕ್ತರಿಗೆ ರಸ್ತೆ ಬದಿ, ಎಲ್ಲೆಡೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹುಗ್ಗಿ, ಪಾಯಸ, ಅನ್ನ ಸಾಂಬಾರ್, ಪುಲಾವ್, ಸಿಹಿ ಪದಾರ್ಥ, ಮಜ್ಜಿಗೆ ಸೇರಿದಂತೆ ವಿವಿಧ ಬಗೆಯ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಗಂಗಾವತಿ: ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜರ 483ನೇ ಆರಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.