ETV Bharat / state

4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 16 ವರ್ಷದ ಬಾಲಕ ಪೊಲೀಸ್ ವಶಕ್ಕೆ - 16 ವರ್ಷದ ಬಾಲಕ ಪೊಲೀಸ್ ವಶಕ್ಕೆ

ದೇಶದಲ್ಲಿ ನಿತ್ಯ ಒಂದಿಲ್ಲೊಂದು ಅತ್ಯಾಚಾರ ವರದಿ ಆಗುತ್ತಲೇ ಇವೆ, ಚಾಕೊಲೇಟ್​ ತರಲು ಹೋದ ಬಾಲಕಿ ಮೇಲೆ ದೌರ್ಜನ್ಯ - 16 ವರ್ಷದ ಅಪ್ರಾಪ್ತನ ವಿರುದ್ದ ಅತ್ಯಾಚಾರ ಆರೋಪ - ಆರೋಪಿ ಪೊಲೀಸರ ವಶಕ್ಕೆ

4 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ; 16 ವರ್ಷದ ಅಪ್ರಾಪ್ತ ಪೊಲೀಸ್ ವಶಕ್ಕೆ
kalburgi-police-takes-custody-16-years-minor-for-rape-attempt-on-4years-girl
author img

By

Published : Dec 26, 2022, 2:39 PM IST

ಚಿಂಚೋಳಿ: ಚಾಕೊಲೇಟ್ ತರಲು ಅಂಗಡಿಗೆ ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ. ಮನೆಯಲ್ಲಿ ಕೊಟ್ಟಿದ್ದ ಹಣ ತೆಗೆದುಕೊಂಡು ಚಾಕೊಲೇಟ್ ತರಲೇಂದು ಪಕ್ಕದ ಅಂಗಡಿಗೆ ತೆರಳಿದ್ದ 4 ವರ್ಷದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಒಳಗೆ ಎಳೆದುಕೊಂಡು ಹೋಗಿ 16 ವರ್ಷದ ಅಪ್ರಾಪ್ತ ಆರೋಪಿ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಲಾಗಿದೆ.

ಸದ್ಯ ಬಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕ ಅರೆಸ್ಟ್​, ಸಹಕರಿಸಿದ ಟೀಚರ್​ ವಿರುದ್ಧವೂ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.