ETV Bharat / state

56 ಮಂದಿಯ ಪ್ರಾಣ ಉಳಿಸಿದ್ದ ಸಾಹಸಿ.. ಕಲಬುರಗಿಯ ಅಗ್ನಿಶಾಮಕ ದಳದ ಯಲ್ಲಪ್ಪಗೆ ಒಲಿದು ಬಂತು ಮುಖ್ಯಮಂತ್ರಿ ಪದಕ‌

author img

By

Published : Jul 12, 2021, 1:18 PM IST

ಧಾರವಾಡ ನಗರದಲ್ಲಿ ಕಟ್ಟಡ ಕುಸಿತವಾದಾಗ 56 ಜನರ ಪ್ರಾಣ ರಕ್ಷಣೆ ಮಾಡುವಲ್ಲಿ ಎದೆಗಾರಿಕೆ ತೋರಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಯಲ್ಲಪ್ಪ ಪೂಜಾರಿ ಅವರಿಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪದಕ‌ ಒಲಿದು ಬಂದಿದೆ.

kalburgi
ಅಗ್ನಿಶಾಮಕ ದಳದ ಸಿಬ್ಬಂದಿ ಯಲ್ಲಪ್ಪ ಪೂಜಾರಿ

ಕಲಬುರಗಿ: ಧಾರವಾಡ ನಗರದಲ್ಲಿ ಕಟ್ಟಡ ಕುಸಿತವಾದಾಗ 56 ಜನರ ಪ್ರಾಣ ರಕ್ಷಣೆಯಲ್ಲಿ ತಮ್ಮದೆಯಾದ ಸಾಹಸ ಧೈರ್ಯ ತೋರಿದ ಅಗ್ನಿಶಾಮಕದಳದ ಸಿಬ್ಬಂದಿ ಯಲ್ಲಪ್ಪ ಪೂಜಾರಿ ಅವರಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ‌ ಒಲಿದು ಬಂದಿದೆ.

ಮೂಲತಃ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದವರಾದ ಯಲ್ಲಪ್ಪ ಪೂಜಾರಿ ಕೃಷಿ ಕುಟುಂಬದಲ್ಲಿ ಜನಿಸಿ ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬಳ್ಳಾರಿಯ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ 2019ರಲ್ಲಿ ಧಾರವಾಡದ ಕರುಣೇಶ್ವರ ನಗರದಲ್ಲಿ ಬೃಹತ್​ ಕಟ್ಟಡ ಕುಸಿದಿತ್ತು. ಕಟ್ಟಡದ ಅವಶೇಷಗಳಡಿ ಸಿಲುಕಿದ ಸುಮಾರು 56 ಜನರ ಪ್ರಾಣವನ್ನು ಉಳಿಸಿ ಯಲ್ಲಪ್ಪ ಸಾಹಸ ಮೆರೆದಿದ್ದರು. ಇವರ ಈ ಕಾರ್ಯ ಗುರುತಿಸಿ ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ರವಿಪ್ರಸಾದ್ ಅವರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಯಲ್ಲಪ್ಪ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ ವಿಳಂಬವಾಗಿತ್ತು. ಜು. 13 ಮಂಗಳವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ಯಲ್ಲಪ್ಪ ಪೂಜಾರಿ ಸ್ವೀಕರಿಸಲಿದ್ದಾರೆ.

ಸದ್ಯ ಯಲ್ಲಪ್ಪ ಈಗ ಕಲಬುರಗಿ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.