ಕಲಬುರಗಿ: ವ್ಯಾಕ್ಸಿನ್ ಪಡೆದರೆ ತೊಂದರೆಯಾಗುತ್ತದೆ ಎಂಬ ಹೆದರಿಕೆಯಿಂದ ಲಸಿಕೆ ಪಡೆಯದೇ ಹಟ ಹಿಡಿದು ಕುಳಿತ ವಿಶೇಷ ಚೇತನ ವ್ಯಕ್ತಿಯ ಮುಂದೆ ಸ್ವತ: ಜಿಲ್ಲಾಧಿಕಾರಿ ಕುಳಿತು ಆತನ ಮನವೊಲಿಸಿದ ಪ್ರಸಂಗ ನಡೆದಿದೆ.
ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದ್ದು, 40 ಜನ ವಿಶೇಷ ಚೇತನರಿಗೆ ವ್ಯಾಕ್ಸಿನ್ ನೀಡಿ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ವಿ ಜ್ಯೋತ್ಸ್ನಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಕುಶಲೋಪರಿ ವಿಚಾರಿಸಿದರು. ಗ್ರಾಮದ ವಿಶೇಷ ಚೇತನ ಬಲಭೀಮ ಎಂಬಾತ ಹೆದರಿಕೆಯಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಲಿಲ್ಲ.
ಈ ಹಿನ್ನೆಲೆ ಡಿಸಿ ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೂ ಬಲಭೀಮ ಮಾತ್ರ ಸುತರಾಂ ಒಪ್ಪಲಿಲ್ಲ. ವ್ಯಾಕ್ಸಿನ್ ತೆಗೆದುಕೊಳ್ಳುವರೆಗೆ ನಾನು ಇಲ್ಲಿಂದ ಹೋಗುವದಿಲ್ಲ ಎಂದು ಡಿಸಿ ಆತನ ಮುಂದೆಯೇ ಕುಳಿತರು. ಸುಮಾರು 20 ನಿಮಿಷದ ಬಳಿಕ ಬಲಭೀಮ ತನ್ನ ಹಟಬಿಟ್ಟು ವ್ಯಾಕ್ಸಿನ್ ಪಡೆಯಲು ಒಪ್ಪಿದಾಗ ಜಿಲ್ಲಾಧಿಕಾರಿ ಸ್ಥಳದಿಂದ ತೆರಳಿದರು.
ಮಗುವಿನ ನಿದ್ದೆ ಹಾಳಾಗದಂತೆ ಮಳೆಯಲ್ಲಿ ಮರಿಯನ್ನು ಅಪ್ಪಿ ಕುಳಿತ ಮಂಗ: ಅಮ್ಮಾ.. ನಿನಗ್ಯಾರು ಸಮ..!