ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 513 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ. 31 ವರ್ಷದ ಯುವಕ ಸೇರಿ ಆರು ಜನ ಬಲಿಯಾಗಿದ್ದಾರೆ. 219 ಜನ ಗುಣಮುಖರಾಗಿದ್ದಾರೆ.
ಮೃತಪಟ್ಟವರ ವಿವರ:
ದರ್ಗಾ ರಸ್ತೆಯ ಚೋಟಾ ರೋಜಾ ಪ್ರದೇಶದ 31 ವರ್ಷದ ಯುವಕ
ಕಾಶಿಕಮಲ್ ಅಪಾರ್ಟ್ಮೆಂಟ್ ನಿವಾಸಿ 56 ವರ್ಷದ ಮಹಿಳೆ
ಹಳೇ ಜೇವರ್ಗಿ ರಸ್ತೆಯ ಬಾಲಾಜಿ ನಗರದ 60 ವರ್ಷದ ವೃದ್ಧ
ಆಳಂದ ಪಟ್ಟಣದ ಶ್ರೀರಾಮ ಮಾರ್ಕೆಟ್ ಪ್ರದೇಶದ 70 ವರ್ಷದ ವೃದ್ಧ
ಶೇಖ್ ರೋಜಾ ಪ್ರದೇಶದ ಆಶ್ರಯ ಕಾಲೋನಿಯ 62 ವರ್ಷದ ವೃದ್ಧ
ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ 55 ವರ್ಷದ ಪುರುಷ
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.