ಕಲಬುರಗಿ : ಬಸವಕಲ್ಯಾಣದ ಬೈ ಎಲೆಕ್ಷನ್ ಈಗ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಜನರಿಗೆ ನಡುಕ ಹುಟ್ಟಿಸಿದೆ. ಇತ್ತೀಚೆಗೆ ನಡೆದ ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ ಹಲವು ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನೌಕರರಿಗೆ ಕೊರೊನಾ ತಗುಲಿದೆ.
ಈಗಾಗಲೇ ಹಲವು ನಾಯಕರಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ಮಾಜಿ ಸಿಎಂ ಧರ್ಮಸಿಂಗ್ ಪುತ್ರರಾದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಹಾಗೂ ಅವರ ಸಹೋದರ ಎಂಎಲ್‌ಸಿ ವಿಜಯಸಿಂಗ್ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಅಲ್ಲದೆ ಅಜಯ್‌ಸಿಂಗ್ ಅವರ ಇಬ್ಬರು ಪುತ್ರರು, ಪಿಎ, ಡ್ರೈವರ್ ಹಾಗೂ ಮನೆ ಕೆಲಸದವರಿಗೂ ಪಾಸಿಟಿವ್ ಕಂಡು ಬಂದಿದೆ. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಭಾಗಿಯಾದ ಕೈ-ಬಿಜೆಪಿ-ಜೆಡಿಎಸ್‌ನ ಹಲವರಿಗೀಗ ನಡುಕ ಆರಂಭಗೊಂಡಿದೆ. ಈಗಾಗಲೇ ಸಿಎಂ ಬಿಎಸ್ವೈ ಮಾಜಿ ಸಿಎಂ ಹೆಚ್‌ಡಿಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರಿಗೆ ಸೋಂಕು ತಗುಲಿದೆ.
ಓದಿ: ರಾಜ್ಯದಲ್ಲಿ ಲಾಕ್ಡೌನ್ ಪ್ರಶ್ನೆಯೇ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ