ಕಲಬುರಗಿ : ಮುಂಬರುವ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ವಿಎಸ್ಎಸ್ ಮೀಡಿಯಾ ಅಡಿಯಲ್ಲಿ ರೂಪೇಶ್ ರಾಜ ನಿರ್ದೇಶನದ 'ಕಾಲಜ್ಞಾನ' ಕನ್ನಡ ಚಿತ್ರ ಬಿಡುಗಡೆ ಆಗಲಿದೆ.
ನಗರದ ಪತ್ರಿಕಾ ಭವನದಲ್ಲಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಚಿತ್ರದ ನಿರ್ದೇಶಕ ರೂಪೇಶ್ ರಾಜ ಅವರು, ಕಾಲಜ್ಞಾನ ಸಿನಿಮಾ ಶೇ.60ರಷ್ಟು ಕಲಬುರಗಿಯಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ, ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ, ನಮಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಸಿನಿಮಾದಲ್ಲಿ ಮಹೇಶ್, ಮಲ್ಲಿಕಾರ್ಜುನ ಪಲ್ಲೇದ್ ಬಾಗಲಕೋಟೆ, ಶರಣ್ ಶೆಟ್ಟಿ, ವಿಜಯ್ ಕುಮಾರ್ ಗೋತಗಿ, ರೇಖಾ ಪಾಟೀಲ್, ವೀಣಾ ಪಾಟೀಲ್, ವಿಚಿತ್ರಸೇನ್ ಗೋಲ್ಡಸ್ಮಿತ್, ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಸಾಗರ, ಸಾಯಬಣ್ಣ ದೊಡ್ಡಮನಿ, ಕಾರ್ತಿಕ್ ಕುಲಕರ್ಣಿ, ಪವಿತ್ರಾ ಪಾಟೀಲ್, ನಾಗರಾಜ್ ಹರಸೂರ, ಸಿದ್ದಾರ್ಥ ಸೇಡಂ, ಸಂಗೀತಾ ಎನ್.ಎಂ.ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ ಎಂದು ತಿಳಿಸಿದರು.
ಬಳಿಕ ಸಾಹಿತಿ ಮಹಿಪಾಲ ರೆಡ್ಡಿ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ ಇದಾಗಿದೆ. ಒಳ್ಳೆಯ ಸಂಸ್ಕೃತಿ, ಸಂಸ್ಕಾರ ನೀಡುವ ನಿಟ್ಟಿನಲ್ಲಿ ಹೊಸ ರೂಪದಲ್ಲಿ ಈ ಕಾಲಜ್ಞಾನ ಚಿತ್ರ ಬಿಡುಗಡೆ ಆಗುತ್ತಿದೆ ಎಂದರು. ಈ ಸಿನಿಮಾದಲ್ಲಿರುವ ನಾಲ್ಕು ಹಾಡುಗಳನ್ನು ನಾಗರಾಜ್ ಬಿ.ಹುಣಸೂರು ಬರೆದಿದ್ದಾರೆ.