ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 3ರಿಂದ 4ಕ್ಕೆ ಏರಿದೆ. ಆದ್ರೆ ಜೀವ ಭಯ ಬಿಟ್ಟು ಜನರು ತರಕಾರಿ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಲಾಕ್ ಡೌನ್ ಸಂಪೂರ್ಣ ಉಲ್ಲಂಘನೆಯಾಗುತ್ತಿದೆ. ಎಪಿಎಂಸಿ ತರಕಾರಿ ಮಾರುಕಟ್ಟೆ ಜನ ಜಂಗುಳಿಯಿಂದ ತುಂಬಿದೆ. ಯಾವುದೇ ಮುಂಜಾಗೃತ ಕ್ರಮಗಳಿಲ್ಲದೆ ತರಕಾರಿ ಸಂತೆ ನಡೆದಿದೆ.

ಜನರು ಜೀವಭಯ ಬಿಟ್ಟು ಗುಂಪು ಗುಂಪಾಗಿ ನಿಂತು ತರಕಾರಿ ಖರೀದಿಸುತ್ತಿದ್ದಾರೆ. ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ ಪಾಲಿಸುವದು ಅಗತ್ಯವಿದೆ. ಸುರಕ್ಷತೆ ನಿಟ್ಟಿನಲ್ಲಿ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕಣ್ಣಿ ತರಕಾರಿ ಮಾರ್ಕೆಟ್ ಸೇರಿ ಹಲವು ತರಕಾರಿ ಮಾರ್ಕೆಟ್ಗಳನ್ನು ಬಂದ್ ಮಾಡಲಾಗಿದೆ.
ಆದರೆ ಎಪಿಎಂಸಿ ತರಕಾರಿ ಮಾರ್ಕೆಟ್ನಲ್ಲಿ ಮಾತ್ರ ಪರಸ್ಪರ ಅಂತರ ಕಾಯ್ದುಕೊಳ್ಳದೆ ಜನರು ತರಕಾರಿ ಮಾರಾಟ ಮಾಡಲು ಹಾಗೂ ಖರೀದಿಸಲು ಮುಗಿಬೀಳುತ್ತಿದ್ದಾರೆ. ಸಾಮಾಜಿಕ ಅಂತರ ಸಂಪೂರ್ಣ ಕಡೆಗಣಿಸಲಾಗಿದೆ.