ಕಲಬುರಗಿ: ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕಲಬುರಗಿ ಎಸ್.ಡಿ.ಆರ್.ಎಫ್ ತಂಡದ 10 ಜನ ಸಿಬ್ಬಂದಿ ತೆರಳಿದ್ದಾರೆ.
ಎಸ್.ಡಿ.ಆರ್.ಎಫ್ ಕಲಬುರಗಿ ಡಿ ತಂಡದ ಎಸ್.ಕೆ.ಹಂಪಗೋಳ, ವಾಲ್ಮೀಕಿ ರಾಥೋಡ್, ಗಬ್ಬರ್ ಸಿಂಗ್ ರಜಪೂತ್, ಚಂದ್ರಶೇಖರಯ್ಯ ಮಠಪತಿ, ಪ್ರಮೋದ್ ಬೆಳ್ಳಂಡಗಿ, ಸಂತೋಷ್ ಬನಸೋಡೆ, ರಾವುತರಾಯ ಬಿರಾದಾರ್, ಶಂಕರಲಿಂಗ ಎ.ಜಿ., ಬಸವರಾಜ್ ಹಾಗೂ ರವೀಂದ್ರ ರತ್ನಾಕರ್ ಸೇರಿ ಒಟ್ಟು ಹತ್ತು ಜನರ ತಂಡ ರಕ್ಷಣಾ ಕಾರ್ಯಕ್ಕೆ ತೆರಳಿದೆ.
ಈಗಾಗಲೇ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದಲ್ಲಿ ಸಿಲುಕಿರುವ ಸಾರ್ವಜನಿಕರು ಹಾಗೂ ದನಕರುಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾಗಿ ಎಸ್.ಡಿ.ಆರ್.ಎಫ್ ಸಿಬ್ಬಂದಿ ತಿಳಿಸಿದ್ದಾರೆ.