ಕಲಬುರಗಿ: ನಾಳೆ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕೇಂದ್ರ ಬಜೆಟ್ ಜನಸಾಮಾನ್ಯರು ಹಾಗೂ ಉದ್ಯಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ನಾಳೆ ಮಂಡಿಸಲಿರುವ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ಹರಿದು ಬರುವ ನಿರೀಕ್ಷೆ ಇಲ್ಲಿನ ಜನರದ್ದಾಗಿದೆ. ಪ್ರತಿ ಬಾರಿಯೂ ಕೇಂದ್ರ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಎಸಗಲಾಗಿದೆ. ಈ ಬಾರಿಯಾದರೂ ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಉತ್ತಮ ಅನುದಾನ ಕಲ್ಪಿಸಿಕೊಡಬಹುದೆಂಬ ನಿರೀಕ್ಷೆಯನ್ನು ಇಲ್ಲಿನ ಜನಸಾಮಾನ್ಯರು ಹೊಂದಿದ್ದಾರೆ.
ಕಲಬುರಗಿ ಜನರ ನಿರೀಕ್ಷೆಗಳು
1 . ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಆಡಳಿತಾವಧಿಯಲ್ಲಿ ಮಂಜೂರು ಮಾಡಲಾದ, ಕಲ್ಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಕ್ಕೆ ಅನುದಾನ ಮೀಸಲಿಡಬೇಕು.
2. ಕಲಬುರಗಿಯ ಐದು ನ್ಯಾಷನಲ್ ಹೈವೆಗಳು ಹಾಗೂ ಎರಡನೇ ರಿಂಗ್ ರಸ್ತೆಗಳು ತಾತ್ವಿಕ ಒಪ್ಪಿಗೆ ಪಡೆದಿದ್ದು, ಹಣಕಾಸು ಮಂಜೂರು ಮಾಡಿ ಕಾಲಮಿತಿಯಲ್ಲಿ ನ್ಯಾಷನಲ್ ಹೈವೆ ಕಾಮಗಾರಿ ಪ್ರಾರಂಭಿಸಬೇಕು
3. ಏಮ್ಸ್ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಆಗ್ರಹ.
4. ನೀಮ್ಸ್ ಕಾರ್ಯರಂಭಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ.
5. 371 (ಜೆ)ಗೆ ಕೇಂದ್ರ ವಿಶೇಷ ಪ್ರಾಕೇಜ್ ನೀಡುವ ನಿರೀಕ್ಷೆ