ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾಣೆಯಲ್ಲಿ ನಾಮನಿರ್ದೇಶಿತ ಎಂಎಲ್ಸಿ ಗಳಿಗೆ ಮತದಾನ ಹಕ್ಕು ಪಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಕಲಬುರಗಿ ಪೀಠ ನಿರಾಕರಿಸಿದ್ದು, ನಿಗದಿಯಂತೆ ಒಂದೂವರೆ ವರ್ಷದ ಬಳಿಕ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ.
ಬಿಜೆಪಿಯ ನಾಮನಿರ್ದೇಶಿತ ಎಂಎಲ್ಸಿ ಗಳಿಗೆ ಮತದಾನದ ಹಕ್ಕು ನೀಡಬಾರದೆಂದು ಮತ್ತು ನಾಮನಿರ್ದೇಶಿತ ಪರಿಷತ್ ಸದಸ್ಯರ ಮತದಾನದ ಹಕ್ಕು ಪಶ್ನಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ವರ್ಷಾ ಜಾನೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಪೀಠ, ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡದ ಹೈಕೋರ್ಟ್ ಕಲಬುರಗಿ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಕಲಬುರಗಿ ಮಹಾನಗರ ಪಾಲಿಕೆಯು 55 ಸದಸ್ಯ ಬಲವನ್ನು ಹೊಂದಿದ್ದು, ಕಾಂಗ್ರೆಸ್ 28 ಸದಸ್ಯ ಬಲ ಹೊಂದಿದ್ದರೆ, ಬಿಜೆಪಿ 22, ಜೆಡಿಎಸ್ 4 ಸದಸ್ಯ ಬಲ ಹೊಂದಿದೆ. ಅತಂತ್ರ ಫಲಿತಾಂಶ ಹಿನ್ನೆಲೆ ಬಹುಮತ ಸಾಬೀತು ಪಡಿಸಿ ಪಾಲಿಕೆ ಚುಕ್ಕಾಣಿ ಹಿಡಿಯಲು ಬಿಜೆಪಿ ಬೇರೆ ಭಾಗದ ಕೆಲಸ ಎಂಎಲ್ಸಿಗಳ ಹೆಸರು ಸೇರ್ಪಡೆ ಮತ್ತು ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣ ಕೋರ್ಟ್ನಲ್ಲಿರುವ ಕಾರಣ ಮೇಯರ್ ಮತ್ತು ಉಪಮೇಯರ್ ಚುನಾವಣೆ ವಿಳಂಬವಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇತ್ತೀಚೆಗಷ್ಟೇ ಆರು ಪರಿಷತ್ ಸದಸ್ಯರಿಗೆ ಮತದಾನ ಮಾಡಲು ಅನುಮತಿ ನೀಡಿತ್ತು. ಪ್ರಕರಣ ಇತ್ಯರ್ಥ ಹಿನ್ನೆಲೆ ಮಾರ್ಚ್ 23 ರಂದು ಮೇಯರ್, ಉಪಮೇಯರ್ ಚುನಾವಣೆ ನಿಗಧಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್ನ ಪಾಲಿಕೆ ಸದಸ್ಯೆ ವರ್ಷಾ ಜಾನೆ, ನಾಮನಿರ್ದೇಶಿತ ಎಂಎಲ್ಸಿ ಗಳಿಗೆ ಮತದಾನದ ಹಕ್ಕಿಲ್ಲ ಎನ್ನುವ ದೆಹಲಿ ಪಾಲಿಕೆ ಚುನಾವಣೆ ಸಂದರ್ಭದ ತೀರ್ಪು ಉಲ್ಲೇಖಿಸಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆಗೆ ಇಲ್ಲ ಮೇಯರ್ .. ಅಧಿಕಾರಿಗಳು ಆಡಿದ್ದೇ ಆಟ.. ಸಮಸ್ಯೆ ಪರಿಹಾಕ್ಕೆ ಕಾಂಗ್ರೆಸ್ ಆಗ್ರಹ..
ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್-ಬಿಜೆಪಿ ತೀವ್ರ ಕಸರತ್ತು: ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನಿರಾಕರಿಸಿದ್ದು ಅರ್ಜಿ ವಿಚಾರಣೆ ಮುಂದೂಡಿದೆ. ಹೀಗಾಗಿ ನಾಳೆ ನಿಗದಿಯಂತೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ಪಾಲಿಕೆ ಗದ್ದುಗೆ ಏರಲು 36 ಸದಸ್ಯ ಬಲ ಬೇಕಿದ್ದು, ಬಹುಮತ ಸಾಬೀತುಪಡಿಸಿ ಮಹಾನಗರ ಪಾಲಿಕೆ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿವೆ.
ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್: ಇತ್ತ 4 ಸದಸ್ಯರನ್ನ ಹೊಂದಿರುವ ಜೆಡಿಎಸ್ ಕಿಂಗ್ ಮೇಕರ್ ಸ್ಥಾನದಲ್ಲಿದ್ದು, ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆಯೋ ಆ ಪಕ್ಷ ಪಾಲಿಕೆ ಚುಕ್ಕಾಣಿ ಹಿಡಿಯಲಿದೆ. ಸದ್ಯ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯಾರಾಗಲಿದ್ದಾರೆ ಕಲಬುರಗಿ ಪಾಲಿಕೆಯ ಕಿಂಗ್ ಯಾರು ಎನ್ನುವುದು ತೀವ್ರ ಕೂತುಹಲ ಮೂಡಿಸಿದೆ.
ಇದನ್ನೂ ಓದಿ: ಕಲಬುರಗಿ ಮೇಯರ್-ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್.. ಕಿಂಗ್ ಮೇಕರ್ ಜೆಡಿಎಸ್ ಬೆಂಬಲ ಯಾರಿಗೆ?