ETV Bharat / state

ಕೊರೊನಾ ಮುಕ್ತ.. ನುಡಿದಂತೆ ಲೋಕ ಕಲ್ಯಾಣಕ್ಕಾಗಿ 300 ಕಿಮೀ ಉರುಳು ಸೇವೆ ಮಾಡಿದ ಶಶಿಕಲಾ ಮಾತೆ - public welfare

ಕೊರೊನಾ ಮುಕ್ತವಾದರೆ ಉರುಳು‌ ಸೇವೆ ಮಾಡುವುದಾಗಿ ಘತ್ತರಗಿ ಭಾಗಮ್ಮ ತಾಯಿಗೆ ಹರಕೆ ಹೊತ್ತಿದ್ದ ತೆಲಂಗಾಣದ ಶಶಿಕಲಾ ಮಾತೆ ಉರುಳು ಸೇವೆ ಮೂಲಕವೇ ತೆಲಂಗಾಣದಿಂದ ಕರ್ನಾಟಕದ ಕಲಬುರಗಿಗೆ ತಲುಪಿದ್ದಾರೆ.

shashikala maate who is serving 300 km for public welfare
ಲೋಕ ಕಲ್ಯಾಣಕ್ಕಾಗಿ 300 ಕಿ.ಮೀ ಉರುಳು ಸೇವೆ ಮಾಡುತ್ತಿರುವ ಮಹಾತಾಯಿ
author img

By

Published : Nov 28, 2022, 8:38 PM IST

Updated : Nov 28, 2022, 9:29 PM IST

ಕಲಬುರಗಿ: ತೆಲಂಗಾಣದ ಜಹೀರಾಬಾದ್​ ತಾಲೂಕಿನ ಶಶಿಕಲಾ‌ ಮಾತೆ ಎಂಬುವವರು ನವೆಂಬರ್ 11ರಂದು ಧನುಶ್ರೀ ಗ್ರಾಮದ ಭವಾನಿ ದೇವಸ್ಥಾನದಿಂದ ಉರುಳು ಸೇವೆ ಪ್ರಾರಂಭಿಸಿದ್ದರು. ತಮ್ಮ‌ ಗ್ರಾಮದಿಂದ ಸುಮಾರು 300 ಕಿಲೋ‌ ಮೀಟರ್ ಅಂತರದಲ್ಲಿರುವ ಕರ್ನಾಟಕದ ಕಲಬುರಗಿ ಜಿಲ್ಲೆಯ ಘತ್ತರಗಿ ಭಾಗಮ್ಮ ದೇಗುಲದವರೆಗೆ ಉರುಳು ಸೇವೆ ಹರಕೆ ಹೊತ್ತಿದ್ದರು. ಈಗ ಬೀದರ್​, ಹುಮ್ನಾಬಾದ್​ ಮಾರ್ಗವಾಗಿ ಕಲಬುರಗಿ ನಗರವನ್ನು ತಲುಪಿದ್ದಾರೆ.

ಉರಳು ಸೇವೆಯಲ್ಲಿ ಮಾತೆ ಅವರ ಜೊತೆ ನೂರಾರು ಭಕ್ತರು ಭಜನೆ, ಕಿರ್ತನೆಗಳನ್ನು ಜಪಿಸುತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜ್ಜೆ ಹಾಕಿದರು. ಕಲಬುರಗಿ ನಗರಲ್ಲಿ ಶಶಿಕಲಾ ಮಾತೆಯನ್ನು ಭಕ್ತರು ಭವ್ಯವಾಗಿ ಸ್ವಾಗತಿಸಿದರು.

ಲೋಕ ಕಲ್ಯಾಣಕ್ಕಾಗಿ 300 ಕಿಮೀ ಉರುಳು ಸೇವೆ.. ಕಲಬುರಗಿಯ ಮಹಾತಾಯಿ ಭಾಗಮ್ಮ

ಈಗಾಗಲೇ ರಾಜ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ಮೂಲಕ ಕ್ರಮಿಸಿಕೊಂಡು ಆಗಮಿಸಿದ್ದು, ಇನ್ನೂ 65 ಕಿಲೋ ಮೀಟರ್ ದೂರದಲ್ಲಿರುವ ಘತ್ತರಗಿವರೆಗೆ ಈ ಸೇವೆ ಮುಂದುವರಿಯಲಿದೆ.

ಇದನ್ನೂ ಓದಿ: ಬಿಜೆಪಿ‌ ಮುಖಂಡ, ವ್ಯಾಪಾರಿ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಆರೋಪಿಗಳ ಬಂಧನ

Last Updated : Nov 28, 2022, 9:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.