ETV Bharat / state

ಕಲಬುರಗಿ ರೈತನಿಗೆ ವರವಾದ ಬಾಳೆ ಕೃಷಿ: ಇರಾಕ್‌ಗೆ ರಫ್ತು, 20 ಲಕ್ಷ ಆದಾಯ - ಬಾಳೆ ಕೃಷಿ ಮಾಡಿ ಲಾಭ

ಆ ರೈತನ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಎತ್ತ ನೋಡಿದ್ರೂ, ಬಾಳೆಗೊನೆಗಳದ್ದೇ ಸಾಮ್ರಾಜ್ಯ. ಬಾಳೆ ಬೆಳೆದ ರೈತನ ಬಾಳು ಬಂಗಾರವಾಗಿದ್ದು, ಹೊರದೇಶಕ್ಕೆ ಸಹ ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಳೆ ರಫ್ತು ಮಾಡಿ 20 ಲಕ್ಷ ರೂ. ಲಾಭ ಪಡೆದಿದ್ದಾರೆ.

Kalaburagi farmer doing the Banana cultivation
ಕಲಬುರಗಿ ರೈತನಿಗೆ ವರವಾದ ಬಾಳೆ ಕೃಷಿ
author img

By

Published : Oct 13, 2022, 3:39 PM IST

ಕಲಬುರಗಿ: ಹಸಿರು ಸೀರೆ ತೊಟ್ಟಂತೆ ಮುದ್ದಾಗಿ ನಿಂತಿರುವ ಬಾಳೆ ಗಿಡಗಳು. ಇನ್ನೊಂದೆಡೆ ಮೈದುಂಬಿ ಆಕರ್ಷಿಸುತ್ತಿರುವ ಬಾಳೆಗೊನೆಗಳು. ಈ ದೃಶ್ಯ ಕಂಡು ಬಂದಿರೋದು, ಜಿಲ್ಲೆಯ ಆಳಂದ ತಾಲೂಕಿನ ನಿಂಬಾಳ ಗ್ರಾಮದಲ್ಲಿ. ಸಾಮಾನ್ಯವಾಗಿ ಬಾಳೆಹಣ್ಣಿಗೆ ವರ್ಷಪೂರ್ತಿ ಡಿಮ್ಯಾಂಡ್ ಇದ್ದೆ ಇರುತ್ತೆ, ಹಾಗಂತ ಬಾಳೆ ಬೆಳೆದ ಪ್ರತಿಯೊಬ್ಬ ರೈತನ ಬದುಕು ಬಂಗಾರ ಆಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ ರೈತ ಗುರುಶಾಂತಗೌಡ ಪಾಟೀಲ್ ಬದುಕು ಬಾಳೆ ಕೃಷಿಯಲ್ಲಿ ಬಂಗಾರವಾಗಿದೆ.

ಕಲಬುರಗಿ ರೈತನಿಗೆ ವರವಾದ ಬಾಳೆ ಕೃಷಿ

20 ಲಕ್ಷ ರೂ. ಆದಾಯ: ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಕೃಷಿ ಮಾಡಿ ಲಾಭ ಮಾಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದ್ದರಿಂದ ಬಾಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗಿದೆ. ಮಧ್ಯವರ್ತಿ ಸಹಾಯದಿಂದ ಒಟ್ಟು 25 ಟನ್​ಗಳಷ್ಟು ಬಾಳೆ ಹಣ್ಣನ್ನು ಇರಾಕ್​ಗೆ ರಫ್ತು ಮಾಡಿ, ಸುಮಾರು 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

Kalaburagi farmer doing the Banana cultivation
ಕಲಬುರಗಿ ರೈತನಿಗೆ ವರವಾದ ಬಾಳೆ ಕೃಷಿ

ಹನಿ ನೀರಾವರಿ ಪದ್ಧತಿ ಅಳವಡಿಕೆ: ಬಾಳೆ ಕೃಷಿ ಬಗ್ಗೆ ಆಲೋಚಿಸಿದ ರೈತ ಗುರುಶಾಂತಗೌಡ ಪಾಟೀಲ್, ಅಟ್ಲಾಂಟಿಕ್ ಜಿ-9 ತಳಿಯ ಬಾಳೆ ಕೃಷಿ ಬಗ್ಗೆ ಒಲವು ತೋರಿದ್ದರು. ಈ ವರ್ಷ ಆರಂಭದ ಜನವರಿ ತಿಂಗಳಲ್ಲಿ ಹೈದರಾಬಾದ್​ನಿಂದ 500 ಸಸಿ ತಂದು ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು. ನಾಟಿಗೂ ಮುಂಚೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ಪೋಲಾಗುತ್ತಿದ್ದ ನೀರು ಉಳಿತಾಯ ಒಂದಡೆಯಾದ್ರೆ, ಕಳೆ ನಿಯಂತ್ರಣ ಕೂಡಾ ಆಗಿದೆ. ಡ್ರೀಪ್ ಮೂಲಕವೇ ರಸಗೊಬ್ಬರ ಔಷಧ ನೀಡಿದ್ದು, ಎಲ್ಲಾ ಬೆಳೆಗೆ ಸಮನಾಂತರವಾಗಿ ಪೂರೈಕೆ ಆಗಿದೆ.

ಇರಾಕ್​​ನಲ್ಲಿ ಡಿಮ್ಯಾಂಡ್​​: ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ನೀರು, ರಸಗೊಬ್ಬರ ಔಷಧ ನೀಡಿದ ಫಲವಾಗಿ ರೋಗ ಕಿಟಭಾದೆ ಇಲ್ಲದೇ ಹತ್ತು ತಿಂಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಬಾಳೆ ಬಂದಿದೆ. ಈ ಬಾಳೆಗೆ ಇರಾಕ್​​ನಲ್ಲಿ ಡಿಮ್ಯಾಂಡ್ ಇದ್ದು, ಬೆಳೆ ನೋಡಲು ಇತರಡೆಯಿಂದ ಜನ ನಿಂಬಾಳ ಗ್ರಾಮಕ್ಕೆ ಬರುತ್ತಿದ್ದಾರೆ.

ಇದನ್ನೂ ಓದಿ: ಹೈಬ್ರೀಡ್ ತಳಿಯ ಬಾಳೆಗೂ ಜವಾರಿ ಹಣ್ಣಿನ ಬೆಲೆ : ಸಂತಸದಲ್ಲಿ ಬೆಳೆಗಾರರು

ಇಲ್ಲಿನ‌ ಬೆಳೆಗಳು ವಿದೇಶಕ್ಕೆ ರಫ್ತು ಆಗುತ್ತಿರುವುದರಿಂದ ರೈತರಿಗೆ ಒಳ್ಳೆಯ ಆದಾಯ ಸಿಗಲಿದೆ. ಆದರೆ ರಫ್ತು ಮಾಡಲು ಹಲವು ತಾಂತ್ರಿಕ ತಾಪತ್ರೆಯಗಳು ಇರೋದ್ರಿಂದ ರೈತರು ಮಧ್ಯವರ್ತಿಗಳ ಮೊರೆ ಹೋಗ್ತಿದ್ದಾರೆ. ಸರ್ಕಾರ ರಫ್ತುಗೆ ನೆರವು ನೀಡಿದರೆ, ಆದಾಯ ದುಪ್ಪಟ್ಟುಗೊಳ್ಳಲಿದೆ. ಅದೆನೇ ಇರಲಿ ತೋಗರಿ ಬೆಳೆಗೆ ಹೆಸರಾಗಿದ್ದ ಕಲಬುರಗಿ ಜಿಲ್ಲೆಯಲ್ಲೀ ಬಾಳೆ ಸದ್ದು ಮಾಡಿತ್ತಿರುವುದು ಸಂತಸದ ವಿಚಾರವಾಗಿದೆ. ನಿಂಬಾಳದ ಬಾಳೆ ಇರಾಕ್​ಗೆ ರಫ್ತಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.