ETV Bharat / state

ಕರ್ತವ್ಯಲೋಪ ಆರೋಪ: ಕಲಬುರಗಿ ಡಿಹೆಚ್ಒ ದಿಢೀರ್​ ವರ್ಗಾವಣೆ - Kalaburagi DHO Transfer

ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು (ಡಿಹೆಚ್ಒ) ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Kalaburagi DHO Transfer
ಡಾ.ಎಂ.ಎ.ಜಬ್ಬಾರ್
author img

By

Published : Jul 30, 2020, 1:36 PM IST

ಕಲಬುರಗಿ: ಕೊರೊನಾ ನಿಯಂತ್ರಿಸುವಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್ಒ) ಡಾ. ಎಂ.ಎ. ಜಬ್ಬಾರ್​​ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಶರತ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಜಶೇಖರ ಮಾಲಿ ಅವರನ್ನು ಪ್ರಭಾರಿ ಡಿಹೆಚ್ಓ ಆಗಿ ಸರ್ಕಾರ ನೇಮಿಸಿದೆ. ಡಾ. ರಾಜಶೇಖರ ಅವರ ಜಾಗಕ್ಕೆ ಜಬ್ಬಾರ್​​ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಕೊರೊನಾ ತಡೆಯುವಲ್ಲಿ ವಿಫಲವಾಗಿದ್ದಾರೆಂದು ಡಿಹೆಚ್ಒ ಆಗಿದ್ದ ಜಬ್ಬಾರ್ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯುಕ್ತಗೊಳಿಸಿ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಆಗ ಡಿಸಿ ಶರತ್ ಅವರು ಜಬ್ಬಾರ್​​ ಅವರ ಬೆಂಬಲಕ್ಕೆ ನಿಂತು ಆ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮಾಡಿದ್ದರು. ಆದರೀಗ ಬೆಂಬಲಕ್ಕೆ ನಿಂತವರೇ ವರ್ಗಾವಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.