ETV Bharat / state

ವಿಧಾನಸಭೆ ಚುನಾವಣೆಗೆ ಜೆಡಿಎಸ್ ರಣಕಹಳೆ: ಅಫಜಲಪುರದಲ್ಲಿ ಭರ್ಜರಿ ಯಾತ್ರೆ

author img

By

Published : Mar 7, 2022, 10:30 AM IST

ಅಫಜಲಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 'ಜೆಡಿಎಸ್ ಸಂಕಲ್ಪ ಸಮಾವೇಶ' ಹಮ್ಮಿಕೊಳ್ಳಲಾಗಿತ್ತು. ಭಾನುವಾರ ನಡೆದ ಈ ಸಮಾವೇಶ ಮುಂದಿನ ಚುನಾವಣೆಗೆ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ‌ ಚುನಾವಣಾ ರಣಕಹಳೆ ಊದಿದ್ದಾರೆ.

JDS  conference at Kalaburgi
ಅಫಜಲಪುರದಲ್ಲಿ ಜೆಡಿಎಸ್​​ ಭರ್ಜರಿ ಯಾತ್ರೆ

ಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಭಾನುವಾರ ನಡೆದ 'ಜೆಡಿಎಸ್ ಸಂಕಲ್ಪ ಸಮಾವೇಶ'ಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ಚಾಲನೆ ನೀಡಿದರು. ಅಫಜಲಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಜೆಡಿಎಸ್ ಸಂಕಲ್ಪ ಸಮಾವೇಷಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​​.ಡಿ ಕುಮಾರಸ್ವಾಮಿ ಚಾಲನೆ

ಬಳಿಕ ಮಾತನಾಡಿದ ಹೆಚ್​ಡಿಕೆ ಇನ್ನೇನು ಚುನಾವಣಾ ಪ್ರಚಾರಕ್ಕೆ ದಿನಗಣನೆ ಆರಂಭವಾಗಿದೆ. ಬದಲಾವಣೆ ಗಾಳಿ ಬೀಸಿದೆ. ಜನ ನಮ್ಮ ಪರವಾಗಿದ್ದಾರೆ. ಮುಂದೇನಿದ್ದರೂ, ಜೆಡಿಎಸ್ ಪರ್ವ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಹಳ ದಿನಗಳ ನಂತರ ಜಿಲ್ಲೆಗೆ ಆಗಮಿಸಿದ ಕುಮಾರಸ್ವಾಮಿ ಅವರನ್ನ ಅಫಜಲಪುರ ಪಟ್ಟಣ ಜನತೆ ಅದ್ಧೂರಿಯಾಗಿ ಸ್ವಾಗತಿಸಿದರು. ಅಫಜಲಪುರದ ಜೆಡಿಎಸ್ ಯುವ ನಾಯಕ ಶಿವಕುಮಾರ್ ನಾಟೀಕರ ಅವರು ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಸಮಾವೇಶಕ್ಕೆ ಕರೆತಂದಿದ್ದಾರೆ.

ಸಮಾವೇಶದಲ್ಲಿ ಮಹಿಳೆಯರು, ಪುರುಷರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಅಫಜಲಪುರ ಮತಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂಬುವುದನ್ನು ಸಾಬೀತು ಮಾಡುವಂತಿತ್ತು.

ಇದನ್ನೂ ಓದಿ: 'ಯಶಸ್ವಿನಿ ಯೋಜನೆ' ಮರು ಜಾರಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದರಾ ಸಿಎಂ ಬೊಮ್ಮಾಯಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.