ಕಲಬುರಗಿ: ಜಿಲ್ಲೆಯ ಜೇವರ್ಗಿ ಬಳಿ ಲಾರಿ ತಡೆದು ದರೋಡೆಗೆ ಯತ್ನಿಸಿದ ಮೂವರನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ.
ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಗಿರೀಶ್ ತುಂಬಗಿ, ರವಿಚಂದ್ರ ಗುತ್ತೇದಾರ್, ರೌಡಿಶೀಟರ್ ಗುಂಡು ಗುತ್ತೇದಾರ್ ಬಂಧಿತ ಆರೋಪಿಗಳು. ಜೇವರ್ಗಿ ತಾಲೂಕಿನ ಕಲ್ಲೂರ್ - ಅವರಾದ್ ಮಾರ್ಗ ಮಧ್ಯೆ ಅಕ್ಕಿ ತುಂಬಿದ ಲಾರಿ ತಡೆದು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದೀರಿ ಎಂದು ಹೆದರಿಸಿ ಲಾರಿ ಮಾಲಿಕನಿಂದ 5 ಲಕ್ಷ ಬೇಡಿಕೆ ಇಟ್ಟು ಮೂರುವರೆ ಲಕ್ಷ ಹಣ ವಸೂಲಿ ಮಾಡಿದ್ದಾರೆಂಬ ದೂರು ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಜೇವರ್ಗಿ ಠಾಣೆ ಪೊಲೀಸರು ತೆಲೆ ಮರೆಸಿಕೊಂಡಿದ್ದ ಮೂವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಿ ಮರಿಯಂ ಜಾರ್ಜ್ ತಿಳಿಸಿದ್ದಾರೆ.