ಕಲಬುರಗಿ: ಕರ್ನಾಟಕ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಐಟಿ ಅಧಿಕಾರಿಗಳು ಶನಿವಾರ ಕಾಂಗ್ರೆಸ್ ಪಾಳಯದ ಇಬ್ಬರು ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಕಲಬುರಗಿ ನೂರ್ ಬಾಗ್ ಪ್ರದೇಶದಲ್ಲಿರುವ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕನೀಜ್ ಫಾತೀಮಾ ಅವರ ಅಪ್ತರಾಗಿರುವ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ವಾಹೇದ್ ಅಲಿ ಫಾತೇಖಾನಿ ಮತ್ತು ಮೊಹಮ್ಮದ್ ಮಸಿ ಜಾಗಿರದಾರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಯಾತ್ರಾರ್ಥಿಗಳ ಕಾರು ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು
ಇದನ್ನೂ ಓದಿ: ಚುನಾವಣಾ ಅಕ್ರಮ: 20 ಕೋಟಿ ಮೌಲ್ಯದ ವಜ್ರಾಭರಣ, ನಗದು ಜಪ್ತಿ