ETV Bharat / state

ಮಹಿಳೆಗೆ ದೆವ್ವ ಬಂದಿದೆ ಎಂಬುದು ಶುದ್ಧ ಸುಳ್ಳು: ಮಾಲ್​ ಮಾಲೀಕನ ಸ್ಪಷ್ಟನೆ

author img

By

Published : Jan 16, 2021, 7:46 PM IST

ಕಲಬುರಗಿಯ ಬಿಗ್ ಬಜಾರ್ ಪಾರ್ಕಿಂಗ್‌ನಲ್ಲಿ ದೆವ್ವವಿದೆ ಎಂಬಂತೆ ಬಿಂಬಿಸಿ ಬರೆದು ವಿಡಿಯೋಗಳನ್ನು ಪೋಸ್ಟ್​ ಮಾಡಲಾಗಿದೆ. ಇದು ಆತಂಕ ಹುಟ್ಟುಹಾಕಿದೆ. ಆದರೆ, ಮಾಲ್​ ಮಾಲೀಕರು ಅದನ್ನು ನಿರಾಕರಿಸಿದ್ದಾರೆ.

It is a lie that the woman is possessed by ghosts
ಮಾಲ್​ ಮಾಲೀಕ ಅನಿಲ್ ಕಳಸ್ಕರ್

ಕಲಬುರಗಿ: ನಗರದ ಬಿಗ್ ಬಜಾರ್ ಶಾಫಿಂಗ್ ಮಾಲ್ ಪಾರ್ಕಿಂಗ್‌ನಲ್ಲಿ ಮಹಿಳೆಗೆ ದೆವ್ವ ಬಂದಿದೆ ಎಂಬುದು ಶುದ್ಧ ಸುಳ್ಳು ಸುದ್ದಿ. ಅದನ್ನು ಯಾರೂ ನಂಬಬೇಡಿ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಮಾಲ್ ಮಾಲೀಕ ಅನಿಲ್ ಕಳಸ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ...ಕೊರೊನಾ ಲಸಿಕೆ ಹಾಕಿಸಿಕೊಂಡವರ ಅನುಭವದ ಮಾತುಗಳಿವು!

ನಿನ್ನೆಯಿಂದ ಸಾಮಾಜಿಕ ಜಾಲತಾಣವಾದಲ್ಲಿ ಎರಡು ವಿಡಿಯೋಗಳು ಹರಿದಾಡುತ್ತಿದ್ದು, ಬಿಗ್ ಬಜಾರ್ ಪಾರ್ಕಿಂಗ್‌ನಲ್ಲಿ ದೆವ್ವವಿದೆ ಎಂಬಂತೆ ಬಿಂಬಿಸಿ ಬರೆದು ವಿಡಿಯೋಗಳನ್ನು ಪೋಸ್ಟ್​ ಮಾಡಲಾಗಿದೆ. ಈ ಕುರಿತು ಸ್ಪಷ್ಟಪಡಿಸಿರುವ ಮಾಲ್​​ ಮಾಲೀಕ, ಅಂತಹ ಯಾವುದೇ ಘಟನೆ ನಡೆದಿಲ್ಲ. ವಿಡಿಯೋದಲ್ಲಿರುವ ಪಾರ್ಕಿಂಗ್‌ಗೂ ಹಾಗೂ ಬಿಗ್ ಬಜಾರ್ ಪಾರ್ಕಿಂಗ್‌‌ಗೂ ಸಾಮ್ಯತೆ ಇಲ್ಲ. ಗೋಡೆ ಬಣ್ಣ ಕೂಡಾ ಬೇರೆ ಇದೆ ಎಂದು ಹೇಳಿದ್ದಾರೆ.

ಮಾಲ್​ ಮಾಲೀಕ ಮಾಲ್​ ಮಾಲೀಕ ಅನಿಲ್ ಕಳಸ್ಕರ್ ಸ್ಪಷ್ಟನೆ

ವಿರೋಧಿಗಳು ಸುಖಾ ಸುಮ್ಮನೆ ಇಲ್ಲಸಲ್ಲದನ್ನು ತೋರಿಸಿ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ‌‌. ವಿಡಿಯೋ ಹರಿಬಿಟ್ಟವರ ಪತ್ತೆಗಾಗಿ ಈಗಾಗಲೇ ಸೈಬರ್ ಕ್ರೈಮ್ ಪೊಲೀಸರ ಗಮನಕ್ಕೆ ತಂದಿದ್ದೇನೆ. ದಯಮಾಡಿ ಸಾರ್ವಜನಿಕರು ವಿಡಿಯೋ ಪೋಸ್ಟ್​ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.