ETV Bharat / state

ಬೆಟ್ಟಿಂಗ್​ನಲ್ಲಿ ಜಯಶ್ರೀ ಮತ್ತಿಮೂಡ್​ ಸಹೋದರನ ಹೆಸರು... ಆರೋಪಿಗಳಿಗಾಗಿ ಶೋಧ

author img

By

Published : Nov 14, 2020, 8:04 PM IST

ಜಯಶ್ರೀ ಮತ್ತಿಮೂಡ್​ ಸಹೋದರ ಗೋರಖನಾಥ್ ಹೆಸರು ಸಹ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಕೇಳಿಬರುತ್ತಿದ್ದು ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಗೋರಖನಾಥ್ ಸೇರಿದಂತೆ ತಲೆಮರೆಸಿಕೊಂಡಿರುವ ಹಲವು ಆರೋಪಿಗಳ ಬಂಧನಕ್ಕೆ ಮಹಾ ಪೊಲೀಸರು ಜಾಲ ಬೀಸಿದ್ದಾರೆ.

IPL Cricket Betting; Search for absconding accused
ಐಪಿಎಲ್ ಬೆಟ್ಟಿಂಗ್​ ಪ್ರಕರಣ

ಕಲಬುರಗಿ : ಐಪಿಎಲ್ ಬೆಟ್ಟಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಬಾಮೈದುನನ ಹೆಸರು ಕೇಳಿಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆಟ್ಟಿಂಗ್​ ವಿಚಾರವಾಗಿ ಮಹಾರಾಷ್ಟ್ರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪತ್ನಿಯ ಕಾರನ್ನು ಕೂಡ ಸೀಜ್ ಮಾಡಿದ್ದಾರೆ. ಇದು ಸ್ಥಳೀಯ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ ದಿಢೀರ್​ ದಾಳಿ ಸಡೆಸಿದ ಸೋಲಾಪುರ ಸಿಸಿಬಿ ಪೊಲೀಸರು, 38.44 ಲಕ್ಷ ರೂ. ನಗದು, ಎರಡು ಕಾರು, ಲ್ಯಾಪ್​​ಟಾಪ್, ಮೊಬೈಲ್ ಹಾಗೂ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಐಪಿಎಲ್ 2ನೆಯ ಕ್ವಾಲಿಫೈಯರ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದ್ದು ಖಚಿತ ಮಾಹಿತಿ ಮೇರೆಗೆ ಸೋಲಾಪುರ ಪಟ್ಟಣದಲ್ಲಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಚೇತನ್ ಬನ್ಸಾಲ್, ವಿಘ್ನೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ನೀಡಿದ ಸುಳಿವಿನ ಮೇರೆಗೆ ಪ್ರಕರಣದ ಬೆನ್ನತ್ತಿದ ಪೊಲೀಸರು ಕಲಬುರಗಿಗೆ ಆಗಮಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಕಾರ್ಯಾಚರಣೆ ವೇಳೆ ಖಚಿತ ಮಾಹಿತಿಯೊಂದಿಗೆ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಬೆಟ್ಟಿಂಗ್​​ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಅತುಲ್ ಶಿರಶೆಟ್ಟಿ ಹಾಗೂ ಪ್ರದೀಪ್ ಕಾರಂಜೆ ಎಂಬುವವರೆ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು.

ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಶಾಸಕರ ಪತ್ನಿ ಜಯಶ್ರೀ ಮತ್ತಿಮೂಡ್​ ಹೆಸರಿನಲ್ಲಿರುವ ಇನ್ನೋವಾ ಕ್ರಿಸ್ಟಾ ಕಾರನ್ನು ಸಹ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಬಂಧಿತರಿಂದ 38.44 ಲಕ್ಷ ನಗದು, ನಾಲ್ಕು ಲ್ಯಾಪ್​ಟಾಪ್, ಒಂದು ಟಿ.ವಿ, ಎರಡು ಕಾರು, ಒಂದು ಸ್ಕೂಟರ್, 13 ಮೊಬೈಲ್, ಬೆಂಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಪಿಎಲ್ ಬೆಟ್ಟಿಂಗ್​ ಪ್ರಕರಣ

ಇನ್ನು ಜಯಶ್ರೀ ಮತ್ತಿಮೂಡ್​ ಸಹೋದರ ಗೋರಖನಾಥ್ ಹೆಸರು ಸಹ ಬೆಟ್ಟಿಂಗ್ ಪ್ರಕರಣದಲ್ಲಿ ಕೇಳಿಬರುತ್ತಿದ್ದು ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಗೋರಖನಾಥ್ ಸೇರಿದಂತೆ ತಲೆಮರೆಸಿಕೊಂಡಿರುವ ಹಲವು ಆರೋಪಿಗಳ ಬಂಧನಕ್ಕೆ ಮಹಾ ಪೊಲೀಸರು ಜಾಲ ಬೀಸಿದ್ದಾರೆ.

ನನಗೂ ಬೆಟ್ಟಿಂಗ್​ ದಂಧೆಗೂ ಸಂಬಂಧವಿಲ್ಲ:

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸವರಾಜ್ ಮತ್ತಿಮೂಡ್, ಕ್ರಿಕೆಟ್ ಬೆಟ್ಟಿಂಗ್​ಗೂ ನನಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮಾವ ಕಾರನ್ನು ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಹೋಗಿ ವಾಪಸ್ಸಾಗಿದ್ದಾರೆ. ಕಾರು ಮನೆ ಮುಂದೆ ಬಿಟ್ಟಾಗ ಪೊಲೀಸರು ದಾಳಿ ಮಾಡಿ ಸೀಜ್​ ಮಾಡಿದ್ದಾರೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಇದಕ್ಕೂ ಮುನ್ನ ಇದೇ ರೀತಿಯ ಷಡ್ಯಂತ್ರಗಳು ನಡೆಸಲಾಗಿತ್ತು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.